ಮಂಗಳೂರು : ಗೃಹರಕ್ಷಕದಳದ ಘಟಕಾಧಿಕಾರಿಗಳ ಸಭೆ

ಮಂಗಳೂರು : ಜ. 29 ರಂದು ದ.ಕ. ಜಿಲ್ಲಾ ಗೃಹರಕ್ಷಕದಳ ದ ಘಟಕಾಧಿಕಾರಿಗಳ ಸಭೆಯು ಜಿಲ್ಲಾ ಕಮಾಂಡೆಂಟ್ ಡಾ: ಮುರಲೀ ಮೋಹನ ಚೂಂತಾರು ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸೆಕೆಂಡ್-ಇನ್-ಕಮಾಂಡ್, ಮೊಹಮ್ಮದ್ ಇಸ್ಮಾಯಿಲ್, ಉಪ ಸಮಾದೇಷ್ಟರಾದ ವಿ. ಪುರುಷೋತ್ತಮ ಮತ್ತು ್ರಭಾರ ಉಪ ಸಮಾದೇಷ್ಟರಾದ ರಮೇಶ್ ಉಪಸ್ಥಿತರಿದ್ದರು. ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಅತೀ ಹೆಚ್ಚು ಗೃಹರಕ್ಷಕಸದಸ್ಯರುಗಳನ್ನು ನಿಯೋಜಿಸಲು ಸೂಚಿಸಲಾಯಿತು. ಹೊಸದಾಗಿ ಸೇರಿದ ಗೃಹರಕ್ಷಕರುಗಳಿಗೆ ಸಮಸವಸ್ತ್ರಗಳನ್ನು ನೀಡಿ ಅವರನ್ನು ಸರದಿಯ ಆಧಾರದ ಮೇಲೆ ನೇಮಿಸಲು ಘಟಕಾಧಿಕಾರಿಗಳಿಗೆ ಸೂಚಿಸಲಾಯಿತು.
ಗೃಹರಕ್ಷಕದಳದಲ್ಲಿ ಶ್ಲಾಘನೀಯ ಸೇವೆಯನ್ನು ಸಲ್ಲಿಸಿರುವ ಮೂಲ್ಕಿ ಗೃಹರಕ್ಷಕದಳದ ಘಟಕಾಧಿಕಾರಿ ಎ ಚ್. ಮನ್ಸೂರ್ ಅವರಿಗೆ 2016 ರ ಮುಖ್ಯಮಂತ್ರಿಗಳ ಬೆಳ್ಳಿ ಪದಕವನ್ನು ಲಭಿಸಿದ್ದು, ಅವರನ್ನು ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು. ಜ.30 ರಂದು ನಿವೃತ್ತರಾಗಲಿರುವ ಡೆಪ್ಯೂಟಿ ಕಮಾಂಡೆಂಟ್, ವಿ. ಪುರುಷೋತ್ತಮ ಇವರ ನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.





