ಸೌದಿ: ಆತ್ಮಾಹುತಿ ದಾಳಿ: ಇಬ್ಬರ ಸಾವು, ಏಳು ಮಂದಿಗೆ ಗಾಯ

ಅಲ್ ಅಹ್ಸ(ಸೌದಿ): ಅಲ್‌ಅಹ್ಸ ಪ್ರಾಂತದ ಮಹಾಸಿನ್‌ನಲ್ಲಿ ಶುಕ್ರವಾರ ಜುಮಾ ನಮಾರ್ ವೇಳೆಗೆ ಆತ್ಮಾಹುತಿ ದಾಳಿ ನಡೆದಿದ್ದು ಇಬ್ಬರು ಮೃತರಾಗಿದ್ದಾರೆ. ಏಳು ಮಂದಿ ಗಾಯಗೊಂಡಿದ್ದಾರೆ. ಆರಾಂಮ್ಕೊ ಉದ್ಯೋಗಿಗಳು ವಾಸಿಸುತ್ತಿದ್ದ ಪ್ರದೇಶದಲ್ಲಿರುವ ಇಮಾಮ್ ರದ ಮಸೀದಿಯಲ್ಲಿ ಆತ್ಮಾಹುತಿ ದಾಳಿಕಾರ ಹಾಠಾತ್ ಸ್ಫೋಟಿಸಿಕೊಂಡಿದ್ದಾನೆ. ಇಬ್ಬರು ಆತ್ಮಾಹುತಿ ದಾಳಿಕೋರರು ಅಲ್ಲಿಗೆ ಬಂದಿದ್ದರು. ಇವರ ವರ್ತನೆಯಲ್ಲಿ ಸಂದೇಹಗೊಂಡ ಭದ್ರತಾ ನೌಕರರು ಮಸೀದಿಯ ಹೊರಗೆ ಅವರನ್ನು ತಡೆಹಿಡಿದಿದ್ದರು. ಒಳಗೆ ಹೋಗಲು ಆಗದಿದ್ದಾಗ ಒಬ್ಬ ಸ್ವಯಂ ಸ್ಫೋಟಿಸಿಕೊಂಡಿದ್ದಾನೆ. ಭದ್ರತಾ ನೌಕರರ ಮೇಲೆ ಕೋವಿ ತೋರಿಸಿ ಪಾರಾಗಲು ಪ್ರಯತ್ನಿಸಿದ ಎರಡನೆ ವ್ಯಕ್ತಿಯನ್ನು ಬಂಧಿಸಿ ಅವನ ದೇಹದಲ್ಲಿರಿಸಲಾಗಿದ್ದ ಬಾಂಬ್‌ನ್ನು ಪತ್ತೆಹಚ್ಚಲಾಗಿದೆ ಎಂದು ಗೃಹಸಚಿವಾಲಯ ತಿಳಿಸಿದೆ
Next Story





