ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸೆರೆ:ಎನ್‌ಐಎ
ಬೆಂಗಳೂರು,ಜ.29: 2014ರಲ್ಲಿ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣವನ್ನು ಭೇದಿಸಿರುವುದಾಗಿ ಹೇಳಿಕೊಂಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯು(ಎನ್‌ಐಎ),ಇತ್ತೀಚಿಗೆ ಎನ್‌ಐಎ ಮತ್ತು ತೆಲಂಗಾಣ ಪೊಲೀಸರಿಂದ ಬಂಸಲ್ಪಟ್ಟಿರುವ ಆಲಂ ಜೇಬ್ ಅಫ್ರಿದಿ ಅಲಿಯಾಸ್ ರಫೀಕ್(30) ಈ ಅಪರಾಧವನ್ನು ಒಪ್ಪಿಕೊಂಡಿರುವುದಾಗಿ ಪ್ರಕಟಿಸಿದೆ.
ಇದೇ ಅಫ್ರಿದಿ ಪರಪ್ಪನ ಅಗ್ರಹಾರದ ದೊಡ್ಡ ನಾಗಮಂಗಲದಲ್ಲಿ ಬಂಧನವನ್ನು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ತೆಲಂಗಾಣ ಎಟಿಎಸ್ ಕಾನ್‌ಸ್ಟೇಬಲ್ ಶ್ರೀನಿವಾಸರನ್ನು ಚೂರಿಯಿಂದ ಇರಿದಿದ್ದ ಆರೋಪಿಯಾಗಿದ್ದಾನೆ. ಆತನನ್ನು 2008ರ ಅಹ್ಮದಾಬಾದ್ ಸ್ಫೋಟಗಳಿಗೆ ಸಂಬಂಸಿದಂತೆ ಬಂಸಲಾಗಿತ್ತು. ವಿಚಾರಣೆ ಸಂದರ್ಭ ಚರ್ಚ್ ಸ್ಟ್ರೀಟ್ ಸ್ಫೋಟವನ್ನು ಆತ ಒಪ್ಪಿಕೊಂಡಿದ್ದಾನೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ. ಅಂದು ಪರಿಸರದ ಕೊಕೊನಟ್ ಗ್ರೋವ್ ರೆಸ್ಟಾರಂಟ್‌ಗೆ ಭೇಟಿ ನೀಡಲಿದ್ದ ಇಸ್ರೇಲಿ ನಿಯೋಗವೊಂದು ಆತನ ಗುರಿಯಾಗಿತ್ತು ಎಂದು ಅವು ಹೇಳಿವೆ.
ಅಫ್ರಿದಿ ಸಿಮಿ ಕಾರ್ಯಕರ್ತನಾಗಿದ್ದು,ಕೇರಳದ ವಾಘ್ಮಾಣ್‌ನಲ್ಲಿ ಸಿಮಿ ಸಭೆಗಳನ್ನು ಏರ್ಪಡಿಸಿದ್ದ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಐದು ವರ್ಷಗಳಿಂದ ತನ್ನ ತಲೆಯ ಮೇಲೆ ಮೂರು ಲ.ರೂ.ಗಳ ಬಹುಮಾನವನ್ನು ಹೊತ್ತಿರುವ ಆತನನ್ನು ತಲೆ ಮರೆಸಿಕೊಂಡಿರುವ ಆರೋಪಿಯೆಂದು ಘೋಷಿಸಲಾಗಿತ್ತು. ಆತ ಹಲವಾರು ಸಿಮಿ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎಂದು ಎನ್‌ಐಎ ಹೇಳಿದೆ.
ಮೂರು ವರ್ಷಗಳಿಗೂ ಅಕ ಸಮಯದಿಂದ ಬೆಂಗಳೂರಿನಲ್ಲಿ ವಾಸವಾಗಿದ್ದ ಅಫ್ರಿದಿ 2014,ಡಿ.28ರಂದು ಕೊಕೊನಟ್ ಗ್ರೋವ್ ರೆಸ್ಟಾರಂಟ್‌ನಲ್ಲಿ ಬಾಂಬ್ ಅಡಗಿಸಿಟ್ಟಿದ್ದ. ಈ ಸ್ಫೋಟ ಪ್ರಕರಣದಲ್ಲಿ ಮಹಿಳೆಯೋರ್ವಳು ಕೊಲ್ಲಲ್ಪಟ್ಟಿದ್ದು, ಹಲವಾರು ಜನರು ಗಾಯಗೊಂಡಿದ್ದರು. ತನ್ನ ನಿರ್ವಾಹಕನ ಸೂಚನೆಯ ಮೇರೆಗೆ ಆತ ಈ ಕೃತ್ಯವೆಸಗಿದ್ದ ಎಂದು ಎನ್‌ಐಎ ಹೇಳಿದೆಯಾದರೂ ಸದ್ರಿ ನಿರ್ವಾಹಕನ ವಿವರಗಳನ್ನು ಬಹಿರಂಗಗೊಳಿಸಿಲ್ಲ. ಈ ಕೃತ್ಯವನ್ನು ಅಫ್ರಿದಿ ಒಬ್ಬನೇ ನಡೆಸಿದ್ದನೇ ಅಥವಾ ಈ ಸಂಚಿನಲ್ಲಿ ಇನ್ನೂ ಹಲವರು ಪಾಲ್ಗೊಂಡಿದ್ದರೇ ಎಂಬ ಬಗ್ಗೆಯೂ ಅದು ಬಾಯಿಬಿಟ್ಟಿಲ್ಲ.
2015,ನವೆಂಬರ್‌ನಲ್ಲಿ ಇಸ್ರೇಲಿ ವೀಸಾ ಕೇಂದ್ರದ ಮೇಲೆ ದಾಳಿ ನಡೆಸಿದ ಆರೋಪವನ್ನು ಅಫ್ರಿದಿ ಮೇಲೆ ಹೊರಿಸಲಾಗಿದೆ.