ಮುಲ್ಕಿ : ರೈಲು ಡಿಕ್ಕಿ - ವ್ಯಕ್ತಿ ಸಾವು
ಮುಲ್ಕಿ, ಜ.29: ರೈಲು ಡಿಕ್ಕಿ ಹೊಡೆದು ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಮುಲ್ಕಿಯಲ್ಲಿ ನಡೆದಿದೆ.
ಮೃತರನ್ನು ಮುಲ್ಕಿ ಸಮೀಪದ ಅತಿಕಾರಿ ಬೆಟ್ಟು ನಿವಾಸಿ ದಾಮೋದರ ಕರ್ಕೆರ (58) ಎಂದು ಗುರುತಿಸಲಾಗಿದೆ.
ಇಂದು ಸಂಜೆ ಹಾಲು ತರಲೆಂದು ದಾಮೋದರ್ ಅವರು ತೆರಳಿದ್ದು ರೈಲ್ವೆ ಹಳಿ ದಾಟುವ ಸಂದರ್ಭದಲ್ಲಿ ರೈಲು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ದಾಮೋದರ್ ಅವರಿಗೆ ಕಿವಿಡುತದ ತೊಂದರೆ ಇತ್ತು ಎನ್ನಲಾಗಿದ್ದು, ರೈಲು ಬರುತ್ತಿರುವುದು ಗೋಚರಿಸದ ಕಾರಣ ಈ ದುರ್ಘಟನೆ ಸಂಭವಿಸಿರ ಬಹುದು ಎಂದು ಅಂದಾಜಿಸಲಾಗಿದೆ.ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





