ಶಾಶ್ವತ ನೀರಾವರಿ ಯೋಜನೆ ಜಾರಿ ನಿಶ್ಚಿತ: ಶಾಸಕ ಡಾ. ಕೆ.ಸುಧಾಕರ್

ಚಿಕ್ಕಬಳ್ಳಾಪುರ, ಜ.29: ಶಾಶ್ವತ ನೀರಾವರಿ ಯೋಜನೆ ಜಾರಿ ವಿಷಯವು ಮಕ್ಕಳಾಟದಂತಲ್ಲ ಅಥವಾ ಸುಳ್ಳು ಹೇಳಿ ಎತ್ತಿನಹೊಳೆ ಯೋಜನೆಗೆ ಹಣವನ್ನು ಮೀಸಲಿಟ್ಟು 13 ಸಾವಿರ ಕೋಟಿ ರೂ. ಪೋಲು ಮಾಡಲು ಸರಕಾರ ಬಯಸುವುದಿಲ್ಲವೆಂದು ಶಾಸಕ ಡಾ. ಕೆ.ಸುಧಾಕರ್ ತಿಳಿಸಿದರು.
ತಾಲೂಕಿನ ದೊಡ್ಡಮರಳಿ ಮತ್ತು ಆವಲಗುರ್ಕಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಶುಕ್ರವಾರ ತಾಪಂ-ಜಿಪಂ ಚುನಾವಣೆ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೊಳಿಸುವ ವಿಚಾರದಲ್ಲಿ ಕಾಂಗ್ರೆಸ್ ಸರಕಾರಕ್ಕೆ ಯಾವುದೇ ಗೊಂದಲವಿಲ್ಲ ಎಂದರು.ತ್ತಿನಹೊಳೆ ಯೋಜನೆಗೆ 13 ಸಾವಿರ ಕೋಟಿ ರೂಗಳನ್ನು ಮೀಸಲಿಟ್ಟಿರುವುದು ವ್ಯರ್ಥ ಮಾಡಲಿಕ್ಕಲ್ಲ, ಈ ಬಗ್ಗೆ ಯೋಜನೆಯನ್ನು ರೂಪಿಸಿರುವುದು ಖ್ಯಾತ ನೀರಾವರಿ ತಜ್ಞರೇ ಹೊರತು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸೇರಿದಂತೆ ಯಾವುದೇ ರಾಜಕೀಯ ಪಕ್ಷದವರಲ್ಲ, ಅಷ್ಟು ಅನುದಾನವನ್ನು ಮೀಸಲಿಟ್ಟು ವ್ಯರ್ಥ ಮಾಡಿದರೆ ನಾಳೆ ಜನರಿಗೆ ಉತ್ತರಿಸಲಾಗದು, ಬದಲಿಗೆ ಜೈಲಿಗೆ ಹೋಗಬೇಕಾಗುತ್ತದೆ. ಇದು ತಿಳಿದಿದ್ದರೂ ಸಹ ಎತ್ತಿನಹೊಳೆಯಿಂದ ನೀರು ಬರುವುದಿಲ್ಲ, ಅವೈಜ್ಞಾನಿಕ ಯೋಜನೆ ಎಂದೇಳುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.್ಕಬಳ್ಳಾಪುರ ಭಾಗದಲ್ಲಿ ಮೊದಲಿನಿಂದಲೂ ನೀರಾವರಿ ಸಮಸ್ಯೆ ಇದೆ. ಇದು ಇಂದು ನಿನ್ನೆಯದಲ್ಲ, ಆಗ ಅಧಿಕಾರದಲ್ಲಿದ್ದರೂ ಸಹ ವಿರೋಧ ಪಕ್ಷಗಳಿಗೆ ನೀರಾವರಿ ಸಮಸ್ಯೆ ಕಾಣಿಸಲಿಲ್ಲ. ಆದರೆ, ಕುರ್ಚಿ ಬಿಟ್ಟ ನಂತರ ನೀರಾವರಿ ಸಮಸ್ಯೆ ಅವರನ್ನು ಕಾಡುತ್ತಿದೆ. ಇವರ ಕುತಂತ್ರಕ್ಕೆ ಜನ ಮರುಳಾಗಬಾರದು. ಎತ್ತಿನಹೊಳೆಯಿಂದ ಈ ಭಾಗಕ್ಕೆ ನೀರಾವರಿ ಸೌಲಭ್ಯ ಸಿಗುತ್ತದೆ. ಇದಲ್ಲದೆ, 1,200 ಕೋಟಿ ರೂ. ವೆಚ್ಚದಲ್ಲಿ ಸಂಸ್ಕರಿಸಿದ ನೀರನ್ನು ಸಹ ಈ ಭಾಗಕ್ಕೆ ಹರಿಸಲಾಗುತ್ತದೆ. ಸರಕಾರ ಬೇರೆ ಬೇರೆ ಯೋಜನೆಗಳ ಜಾರಿಯ ಬಗ್ಗೆಯೂ ಚಿಂತನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ನೀರಾವರಿ ವಿಷಯದಲ್ಲಿ ಎಲ್ಲರೂ ಒಗಟ್ಟಿನಿಂದ ನಡೆದುಕೊಳ್ಳಬೇಕೆಂದರು.ಾಗಲೇ 200 ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಹೊಸದಾಗಿ ಗ್ರಾಮೀಣ ಭಾಗದಲ್ಲಿ 170 ಕಿ.ಮೀ ಮತ್ತು ಎಡಿಆರ್ ಯೋಜನೆಯಡಿ 110 ಕಿ.ಮೀ ಸೇರಿದಂತೆ ಒಟ್ಟು 280 ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಲು ಮುಂದಾಗಿದು,್ದ ಆವಲಗುರ್ಕಿಯಲ್ಲಿ 7.5 ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಶುದ್ದೀಕರಣ ಘಟಕ ನಿರ್ಮಾಣ, ಸಿಸಿ ರಸ್ತೆ ನಿರ್ಮಾಣಕ್ಕೆ 10.5 ಲಕ್ಷ ರೂ, ರಾಷ್ಟ್ರೀಯ ಹೆದ್ದಾರಿ 7 ರಿಂದ ಆವಲಗುರ್ಕಿ ಗ್ರಾಮದ ರಸ್ತೆಗೆ 5ವರೆ ಕೋಟಿ ರೂ. ನೀಡಲಾಗುತ್ತಿದೆ. ಇಲ್ಲಿಗೆ ಹೆಚ್ಚಿನ ವಸತಿ ಯೋಜನೆಯಲ್ಲಿ ಮನೆಗಳು ಮಂಜೂರಾಗಿವೆ. ಇದು ಅಭಿವೃದ್ಧಿ ಕೆಲಸಗಳಲ್ಲವೇ ಎಂದು ಪ್ರಶ್ನಿಸಿದ ಅವರು, ವಿರೋಧ ಪಕ್ಷಗಳು ಮಾತನಾಡುವುದನ್ನು ಕೇಳಿಸಿಕೊಂಡರೆ ಅವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದಾರೇನೋ ಎಂಬ ಅನುಮಾನ ಮೂಡುತ್ತದೆ ಎಂದು ಲೇವಡಿ ಮಾಡಿದರು.ಭಿವೃದ್ಧಿ ಕೆಲಸಗಳನ್ನು ಯಾರೇ ಮಾಡಿದರೂ ಸಹ ಮೆಚ್ಚಿಕೊಳ್ಳಬೇಕು. ವಿರೋಧ ಪಕ್ಷಗಳಾಗಲಿ ಇಲ್ಲವೇ ಅಧಿಕಾರದಲ್ಲಿರುವರಾದರೂ ಸರಿ, ಚಿಕ್ಕಬಳ್ಳಾಪುರ ನಗರದಲ್ಲಿ ಮುಂದಿನ ಮಾರ್ಚ್ ತಿಂಗಳಲ್ಲಿ 500 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ಸಿಗಲಿದೆ. ಇದನ್ನೆಲ್ಲಾ ಕಾರ್ಯಕರ್ತರು ಜನರಿಗೆ ತಿಳಿಸಬೇಕು. ಅಭಿವೃದ್ಧಿ ಕೆಲಸಗಳನ್ನು ನೋಡಿಕೊಂಡು ಜನ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುವಂತೆ ಮಾಡಬೇಕೆಂದು ಸೂಚಿಸಿದರು.





