ರಶ್ಯ, ಚೀನಾಕ್ಕೆ ಕೊರಿಯ ಮೊರೆ?
ಸಿಯೋಲ್, ಜ. 29: ಇತ್ತೀಚಿನ ಪರಮಾಣು ಪರೀಕ್ಷೆಗಳ ಹಿನ್ನೆಲೆಯಲ್ಲಿ, ಕಠಿಣ ವಿಶ್ವಸಂಸ್ಥೆ ದಿಗ್ಬಂಧನೆಗಳ ಭೀತಿಯನ್ನು ಎದುರಿಸುತ್ತಿರುವ ಉತ್ತರ ಕೊರಿಯ, ಭದ್ರತಾ ಮಂಡಳಿಯಲ್ಲಿರುವ ತನ್ನ ಮಿತ್ರ ದೇಶಗಳ ಮೊರೆ ಹೋಗಿದೆ ಎಂದು ಹೇಳಲಾಗಿದೆ. ಅದು ತನ್ನ ಉನ್ನತ ರಾಜತಾಂತ್ರಿಕರನ್ನು ಮಾಸ್ಕೊ ಮತ್ತು ಬೀಜಿಂಗ್‌ಗೂ ಕಳುಹಿಸಿದೆ ಎನ್ನಲಾಗಿದೆ.
ವೀಟೊ ಅಧಿಕಾರ ಹೊಂದಿರುವ ಭದ್ರತಾ ಸಮಿತಿಯ ಖಾಯಂ ಸದಸ್ಯ ದೇಶಗಳಾದ ರಶ್ಯ ಮತ್ತು ಚೀನಾ, ಈ ಹಿಂದೆಯೂ ಉತ್ತರ ಕೊರಿಯದ ಪ್ರಚೋದನೆಗಳಿಗೆ ಅಂತಾರಾಷ್ಟ್ರೀಯ ಪ್ರತಿಕ್ರಿಯೆಯ ತೀವ್ರತೆಯನ್ನು ಕಡಿಮೆ ಮಾಡುವಲ್ಲಿ ನೆರವಾಗಿದ್ದವು.
ಉಪ ವಿದೇಶ ಸಚಿವ ಪಾಕ್ ಮಯಾಂಗ್-ಗುಕ್ ನೇತೃತ್ವದ ನಿಯೋಗವೊಂದು ಇಂದು ಮಾಸ್ಕೋಗೆ ಹೊರಟಿದೆ ಎಂದು ಉತ್ತರ ಕೊರಿಯದ ಅಧಿಕೃತ ಸುದ್ದಿ ಸಂಸ್ಥೆ ಕೆಸಿಎನ್‌ಎ ವರದಿ ಮಾಡಿದೆ.
Next Story





