ಗಂಗಾವತಿ: ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆ
ಗಂಗಾವತಿ, ಜ.29: ಕೊಪ್ಪಳದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕೆಪಿಸಿಸಿ ವೀಕ್ಷಕ ಆನಂದ ಅವರ ನೇತೃತ್ವದಲ್ಲಿ ಶುಕ್ರವಾರ ಇಲ್ಲಿನ ಜೆಡಿಎಸ್ ಮುಖಂಡರು ಸೇರಿ 22 ತಾಪಂ ಸದಸ್ಯರು, 265 ಗ್ರಾಪಂ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.ೆಡಿಎಸ್ ಮುಖಂಡರಾದ ಎಸ್.ಬಿ. ಖಾದ್ರಿ, ಶ್ಯಾಮೀದ್ ಮನಿಯಾರ್, ರಾಘವೇಂದ್ರ ಶ್ರೇಷ್ಠಿ, ಖಾಸೀಂಸಾಬ್ ಗದ್ವಾಲ್, ಸಂಗಮೇಶ ಬಾದವಾಡಗಿ, ರಮೇಶ ಯಲ್ಲಮಗಿರಿ, ಮಲ್ಲೇಶಪ್ಪ ಗುಮಗೇರಿ, ನಾಗನಗೌಡ ಮಾಲಿಪಾಟೀಲ್, ಗ್ರಾ.ಪಂ ಸದಸ್ಯ ಫಕೀರಪ್ಪ ಯಮ್ಮಿ ಸೇರಿದದಂತೆ 22 ತಾಲೂಕು ಪಂಚಾಯತ್ ಸದಸ್ಯರು, 265 ಗ್ರಾಪಂ ಸದಸ್ಯರು ಕಾಂಗ್ರೆಸ್ ಸೇರ್ಪಡೆಯಾದರು.ಸಂದರ್ಭದಲ್ಲಿ ಕೆಪಿಸಿಸಿ ವೀಕ್ಷಕ ಆನಂದ ಮಾತನಾಡಿ, ಜೆಡಿಎಸ್ ಮುಖಂಡರು ಸೇರ್ಪಡೆಯಾಗಿರುವುದು ತುಂಬಾ ಸಂತಸ ತಂದಿದೆ. ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಹಾಗೂ ಸಿ.ಎಂ. ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕೊಡಿಸಲಾಗುವುದು. ಸೇರ್ಪಡೆಯಾದವರು ಪಕ್ಷದ ಏಳಿಗೆಗಾಗಿ ಶ್ರಮಿಸುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಹಿಟ್ನಾಳ, ಶಾಂತಣ್ಣ ಮುದಗಲ್, ಅಂದಾನಪ್ಪ ಅಗಡಿ, ಎಸ್.ಬಿ. ನಾಗರೆಡ್ಡಿ, ಮರ್ದಾನಲಿ ಅಡ್ಡೆವಾಲೆ, ಅಮ್ಜದ್ ಪಟೇಲ್, ಕೆ.ಎಂ.ಎಫ್ ಅರ್ಧಯಕ್ಷ ವೆಂಕನಗೌಡ ಹಿರೇಗೌಡರ್ ಮತ್ತಿತರರು ಉಪಸ್ಥಿತರಿದ್ದರು.





