ಕೋಲಾರ: ವರಿಷ್ಠರಿಗೆ ತಲೆನೋವಾದ ಜಿಪಂ ಟಿಕೆಟ್ ಹಂಚಿಕೆ
ಕೋಲಾರ, ಜ.29: ತಾಲೂಕಿನಲ್ಲಿ ಟಿಕೆಟ್ ಹಂಚಿಕೆ ವಿಚಾರ ವಿವಿಧ ಪಕ್ಷಗಳ ವರಿಷ್ಠರಿಗೆ ಬಿಡಿಸಲಾರದ ಕಗ್ಗಂಟಾಗಿದೆ. ತೀವ್ರ ಕುತೂಹಲ ಕೆರಳಿಸಿದ್ದ ವಕ್ಕಲೇರಿ ಮತ್ತು ಹೋಳೂರು ಜಿಪಂ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಗೊಂದಲ ಮುಂದುವರಿದಿದೆ. ವಕ್ಕಲೇರಿ ಕ್ಷೇತ್ರದಲ್ಲಿ ಇತ್ತೀಚೆಗೆ ವರ್ತೂರು ಪ್ರಕಾಶ್ ಬೆಂಬಲ ಪಡೆದು ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಎಸ್.ಬಿ.ಮುನಿವೆಂಕಟಪ್ಪ, ವರ್ತೂರು ಪ್ರಕಾಶ್ ಬೆಂಬಲಿತ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ದಲಿತ ಮುಖಂಡ ವಕ್ಕಲೇರಿ ರಾಜಪ್ಪ, ಮಾಜಿ ಜಿಪಂ ಸದಸ್ಯ ಬಾಲಾಜಿ ಚೆನ್ನಯ್ಯ ಪ್ರಮುಖ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.ಕ್ಷೇತ್ರದಲ್ಲಿ ಎಸ್.ಬಿ.ಮುನಿವೆಂಟಪ್ಪ ಅವರನ್ನು ಕಣಕ್ಕಿಳಿಸಲು ವರ್ತೂರು ಪ್ರಕಾಶ್ ಆಸಕ್ತಿ ತೋರಿದ್ದರೂ, ಸಂಸದ ಕೆ.ಎಚ್.ಮುನಿಯಪ್ಪ ಇದಕ್ಕೆ ಅಡ್ಡಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದಲೂ ಕೆ.ಎಚ್.ಮುನಿಯಪ್ಪ ಅವರನ್ನು ಒಲಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ.ಳೆದ 6 ವರ್ಷಗಳಿಂದಲೂ ವರ್ತೂರು ಪ್ರಕಾಶ್ ಅವರ ಬೆಂಬಲಿಗರಾಗಿ ವಕ್ಕಲೇರಿಯಲ್ಲಿ ಪೂರ್ಣಾವಧಿಗೆ ದುಡಿದು, ಒಂದು ಅವಧಿಗೆ ವಕ್ಕಲೇರಿ ಗ್ರಾಪಂ ಅಧ್ಯಕ್ಷರಾಗಿ ವರ್ತೂರ್‌ಗೆ ಒಳ್ಳೆಯ ಹೆಸರು ತಂದು ಕೊಟ್ಟ ಗುತ್ತಿಗೆದಾರ ವಕ್ಕಲೇರಿ ರಾಜಪ್ಪ ಈ ಬಾರಿಯ ವಕ್ಕಲೇರಿ ಮೀಸಲು ಕ್ಷೇತ್ರದ ಅಭ್ಯರ್ಥಿ ಎಂದೇ ಬಿಂಬಿತರಾಗಿ ಕ್ಷೇತ್ರದಲ್ಲಿ ಪೂರ್ವ ತಯಾರಿ ನಡೆಸಿದ್ದರು.ದರೆ, ಜೆಡಿಎಸ್ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ, ಶ್ರೀನಿವಾಸಗೌಡರ ಬಂಟರಾಗಿದ್ದ ಎಸ್.ಬಿ.ಮುನಿವೆಂಕಟಪ್ಪ ಕೇವಲ ಅಧಿಕಾರದ ಅವಕಾಶಕ್ಕಾಗಿ ಪಕ್ಷಾಂತರಗೊಂಡು ಹೋಳೂರು ಕ್ಷೇತ್ರದಿಂದ ವಕ್ಕಲೇರಿ ಕ್ಷೇತ್ರದಲ್ಲಿ ಸ್ಪರ್ಧಿಯಾಗುವುದನ್ನು ಸ್ಥಳೀಯರೇ ವಿರೋಧಿಸುತ್ತಿದ್ದರೂ, ಶಾಸಕ ವರ್ತೂರು ಪ್ರಕಾಶ್ ಎಸ್.ಬಿ.ಮುನಿವೆಂಕಟಪ್ಪ ಪರ ವಕಾಲತ್ತು ವಹಿಸಿರುವುದು ಆಶ್ಚರ್ಯ ತಂದಿದೆ. ಮತ್ತೊಂದೆಡೆ ಹೋಳೂರು ಕ್ಷೇತ್ರದ ಟಿಕೆಟ್‌ಗಾಗಿ ಬ್ಯಾಲಹಳ್ಳಿ ಶಂಕರೇಗೌಡರ ಪತ್ನಿ ಚೌಡಮ್ಮ, ಸೊಣ್ಣೆಗೌಡರ ಪತ್ನಿ ಮೇನಕಾ, ಬ್ಯಾಟಪ್ಪ ಅವರ ಸೊಸೆ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಈ ಮೂವರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಬ್ಯಾಲಹಳ್ಳಿ ಗೋವಿಂದಗೌಡ, ಎಸ್.ಬಿ.ಮುನಿವೆಂಕಟಪ್ಪ ಮತ್ತು ದಳಸನೂರು ಗೋಪಾಲಕೃಷ್ಣ ಅವರ ಹೆಗಲಿಗೆ ವಹಿಸಲಾಗಿದೆ. ಅಂತಿಮವಾಗಿ ಚೌಡಮ್ಮ ಅವರಿಗೆ ಟಿಕೆಟ್ ಸಿಗುವ ಲಕ್ಷಣಗಳು ಇವೆ ಎಂದು ಹೇಳಲಾಗುತ್ತಿದೆ.ತ್ತ ಜೆಡಿಎಸ್ ಪಕ್ಷದಲ್ಲಿ ಮಾಜಿ ಸಚಿವ ಕೆ.ಶ್ರೀನಿವಾಸಗೌಡರಿಗೆ ಟಿಕೆಟ್ ಹಂಚಿಕೆ ಅಡಕತ್ತರಿಯಲ್ಲಿ ಸಿಕ್ಕ ಅಡಿಕೆಯಂತಾಗಿದೆ. ತಾಲೂಕಿನ 7 ಜಿಪಂ ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳ ಆಯ್ಕೆಯನ್ನು ಶ್ರೀನಿವಾಸಗೌಡರಿಗೇ ವಹಿಸಲಾಗಿದ್ದು, ವಕ್ಕಲೇರಿಯಿಂದ ಎಪಿಎಂಸಿ ಮಾಜಿ ಅಧ್ಯಕ್ಷ ಈರಪ್ಪ, ಹುತ್ತೂರು ಕ್ಷೇತ್ರದಿಂದ ಜಿಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿಗೆ ಟಿಕೆಟ್ ಬಹುತೇಕ ಖಚಿತವಾಗಿದೆ. ಇನ್ನು ನರಸಾಪುರ, ಕ್ಯಾಲನೂರು, ಹೋಳೂರು, ಕ್ಷೇತ್ರಗಳ ಟಿಕೆಟ್‌ಗೆ ಕೆಲವರು ತೀವ್ರ ಕಸರತ್ತು ನಡೆಸುತ್ತಿದ್ದಾರೆ.
ನರಸಾಪುರ, ವೇಮಗಲ್ ಹಾಗೂ ಕ್ಯಾಲನೂರು ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ಎಲ್ಲರೂ ಪಕ್ಷಕ್ಕೆ ದುಡಿದವರೇ, ಯಾರನ್ನ್ನೂ ಹಗುರವಾಗಿ ಪರಿಗಣಿಸುವಂತಿಲ್ಲ. ನರಸಾಪುರ ಜಿಪಂ ಕ್ಷೇತ್ರಕ್ಕೆ ಎಪಿಎಂಸಿ ಮಾಜಿ ಅಧ್ಯಕ್ಷೆ ರಾಜೇಶ್ವರಿ ತನಗೆ ಟಿಕೆಟ್ ಬೇಕೆಂದು ಪಕ್ಷದ ವರಿಷ್ಠರ ಮೇಲೆ ಒತ್ತಡ ಹಾಕುತ್ತಿದ್ದರೆ, ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ವಾನರಾಶಪ್ಪ ಜೆಡಿಎಸ್‌ನಲ್ಲಿ ಮೊದಲಿನಿಂದಲೂ ಗುರುತಿಸಿಕೊಂಡಿದ್ದು, ಪತ್ನಿ ಪ್ರಮೀಳಮ್ಮ ಅವರಿಗೆ ಟಿಕೆಟ್ ಕೊಡಬೇಕೆಂದು ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ.
ಆದರೆ ರಾಜೇಶ್ವರಿ ಅವರಿಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯ ಬೆಂಬಲ ಇರುವುದರಿಂದ ಅವರಿಗೆ ಟಿಕೆಟ್ ಸಿಗಲಿದೆ ಎಂದು ಹೇಳಲಾಗುತ್ತಿದೆ. ಕ್ಯಾಲನೂರು ಜಿಪಂ ಕ್ಷೇತ್ರಕ್ಕೆ ವಕ್ಕಲೇರಿ ಚೌಡೇಶ್ವರಿ ರಾಮು, ಎಪಿಎಂಸಿ ಮಾಜಿ ಅಧ್ಯಕ್ಷ ಗೋಪಾಲಪ್ಪ ಪತ್ನಿ ಲಕ್ಷ್ಮೀದೇವಮ್ಮ, ಯುವ ಮುಖಂಡ ದಯಾನಂದ್ ಅವರ ಪತ್ನಿ ರೇಖಾ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ಹೊರಗಿನವರಿಗೆ ಟಿಕೆಟ್ ಕೊಡಬಾರದು ಎಂದು ದಯಾನಂದ್ ವರಿಷ್ಠರಿಗೆ ಆಗ್ರಹಿಸಿದ್ದಾರೆ. ಚೌಡೇಶ್ವರಿ ರಾಮು ವರ್ತೂರು ಬಣ ಬಿಟ್ಟು ಆಪತ್ಕಾಲದಲ್ಲಿ ಜೆಡಿಎಸ್‌ಗೆ ಶಕ್ತಿ ತುಂಬಿದವರು. ಈ ಹಿನ್ನೆಲೆಯಲ್ಲಿ ಚೌಡೇಶ್ವರಿ ಅವರಿಗೆ ಟಿಕೆಟ್ ನೀಡಲೇಬೇಕಾದ ಒತ್ತಡಕ್ಕೆ ಪಕ್ಷದ ಮುಖಂಡರು ಸಿಕ್ಕಿಕೊಂಡಿದ್ದಾರೆ. ದೇ ರೀತಿ ಹೋಳೂರು ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಹಲವು ಒತ್ತಡಗಳ ನಡುವೆಯೂ ಮುದುವಾಡಿ ಶ್ರೀನಿವಾಸ್‌ಗೆ ಟಿಕೆಟ್ ಸಿಗುವ ಲಕ್ಷಣಗಳು ಇವೆ. ಸುಗಟೂರು ಕ್ಷೇತ್ರದಲ್ಲಿ ಮೂರಂಡಹಳ್ಳಿ ಗೋಪಾಲ್, ಶಿವಾರೆಡ್ಡಿ, ಕಿತ್ತಂಡೂರು ನಂಜುಂಡಪ್ಪ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ವೇಮಗಲ್ ಜಿಪಂ ಕ್ಷೇತ್ರಕ್ಕೆ ಎಲ್ಲ ಸಂದರ್ಭಗಳಲ್ಲಿ ಕಲ್ಲುಬಂಡೆಯಂತೆ ಪಕ್ಷಕ್ಕೆ ಆಸರೆಯಾಗಿದ್ದ ನಾಗನಾಳ ಸೋಮಣ್ಣ ಟಿಕೆಟ್ ಕೇಳಿದ್ದಾರೆ. ಆದರೆ ಟಿಕೆಟನ್ನು ಬಲಿಜ ಸಮಾಜದ ಮುಖಂಡ ವೆಂಕಟೇಶ್‌ಗೆ ಕೊಡುವಂತೆ ದೇವೇಗೌಡರು ಸೂಚಿಸಿದ್ದು, ಟಿಕೆಟ್ ಹಂಚಿಕೆ ಕೆಲಸ ಇರಿಸು ಮುರಿಸು ಉಂಟು ಮಾಡಿದೆ.







