‘ಕುರುಬನ ಕಟ್ಟೆಯಲ್ಲಿಪ್ರಾಣಿ ಬಲಿ ತಡೆ’
ಕೊಳ್ಳೇಗಾಲ, ಜ.29: ಬಿಳಿಗಿರಿರಂಗ ನಬೆಟ್ಟ ಜಾತ್ರೆ ಹಾಗೂ ಚಿಕ್ಕಲ್ಲೂರು ಜಾತ್ರೆಯಲ್ಲಿ ಈ ಬಾರಿ ಸಂಪೂಣರ್ ವಾಗಿ ಪ್ರಾಣಿ ಬಲಿ ತಡೆಗಟ್ಟಿದಂತೆ ಮುಂದೆ ತಾಲೂಕಿನ ಕುರುಬನ ಕಟ್ಟೆಯಲ್ಲಿ ಕೂಡ ಸಂಪೂರ್ಣ ಪ್ರಾಣಿ ಬಲಿ ತಡೆಗಟ್ಟಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಅವರು ತಿಳಿಸಿದರು.
ಪಟ್ಟಣದ ಶಾಸಕಿ ವಸಂತಿ ಗೃಹದಲ್ಲಿ ಕರೆಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಿರಾರು ಭಕ್ತರು ದೇವಾಲಯ ಆಡಳಿತ ಮಂಡಳಿ ಜಿಲ್ಲಾಡಳಿತದ ಸಹಕಾರ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆ ಪ್ರಾಣಿ ಬಲಿ ಮುಕ್ತ ಜಾತ್ರೆಯಾಗಿ ಯಶಸ್ಸಿಯಾಗಲು ಕಾರಣಯಾಗಿದ್ದಾರೆ ಎಂದರು.
ಸುಮಾರು ಸಾವಿರಾರು ವರ್ಷಗಳ ಅಂಧ ಶ್ರದ್ಧೆ ಮೌಢ್ಯವನ್ನು ಕೇವಲ 6 ವರ್ಷಗಳಲ್ಲಿ ಅಂತ್ಯಗೊಳಿಸಿದ ಐತಿಹಾಸಿಕ ಮೈಲಿಗಲ್ಲು ಈ ಬಾರಿ ಪ್ರಾಣಿ ಮತ್ತು ಪರಿಸರ ಪ್ರಯತ್ತ ಚಳವಳಿಗೆ ಇದ್ದು, ಈ ಗೆಲುವಿಗೆ ಶ್ರಮಿಸಿದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದರು.ಬಾರಿ ನಡೆಯುವ ಕಪ್ಪಡಿ ಜಾತ್ರೆಯಲ್ಲಿ ಹಾಗೂ ಹನೂರು ತಾಲೂಕಿನ ಬೂದಬಾಳು ಕ್ಷೇತ್ರ ಸೇರಿದಂತೆ ರಾಜ್ಯಾದ್ಯಂತ ದೇವಾಲಯಗಳಲ್ಲಿ ಸಂಪೂರ್ಣ ಪ್ರಾಣಿ ಬಲಿ ನಿಷೇಧ ಜಾರಿಗೆ ತರುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.ಲ್ಲೆಯ ಎಲ್ಲ ದೇವಾಲಯಗಳನ್ನು ಪಟ್ಟಿ ಮಾಡಿ, ಇವುಗಳ ಪೈಕಿ ಬಲಿ ನಡೆಯುತ್ತಿರುವ ದೇವಾಲಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಜಿಲ್ಲೆಯ ಎಲ್ಲ ದೇವಾಲಯಗಳನ್ನು ಬಲಿ ಮುಕ್ತ ದೇವಾಲಯಗಳಾಗಿಸಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾ ಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವ ಪ್ರಾಣಿ ಮಂಡಳಿಯ ರಾಜ್ಯ ಮಹಿಳಾ ಸಂಚಾಲಕಿ ಸುನಂದಾದೇವಿ ಉಪಸ್ಥಿತರಿದ್ದರು.





