ಬಾಲಕಿಯ ಅತ್ಯಾಚಾರಕ್ಕೆ ಯತ್ನ
ಗಂಗಾವತಿ, ಜ.29: ಹೊಸಳ್ಳಿ ರಸ್ತೆಯ ಜೈಭೀಮ್ ನಗರದಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ ಇಬ್ಬರು ಅಪ್ರಾಪ್ತ ಬಾಲಕರು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬುಧವಾರ ಸಂಜೆ ನಾಲ್ಕು ಗಂಟೆ ಸುಮಾರಿನಲ್ಲಿ ಜರಗಿದೆ. ಮನೆ ಸಮೀಪ ಆಟವಾಡುತ್ತಿದ್ದ ನಾಲ್ಕುವರ್ಷದ ಹೆಣ್ಣು ಮಗುವನ್ನು ರಾಜ ಭಕ್ಷಿ(17)ಹಾಗೂ ಮಹೆಬೂಬ್ ಪಾಷಾ(12) ಎಂಬ ಬಾಲಕರು ಪುಸಲಾಯಿಸಿ ಪಕ್ಕದ ಶೆಡ್‌ಗೆ ಕರೆದೊಯ್ದು ಅತ್ಯಾಚಾರ ಮಾಡಲು ಯತ್ನಿಸುತ್ತಿರುವಾಗ ಮಗುವಿನ ಸಹೋದರಿ ನೋಡಿದ್ದಾಳೆ. ಇದನ್ನರಿತ ಆರೋಪಿಗಳು ತಕ್ಷಣ ಓಡಿ ಹೋಗಿದ್ದಾರೆ. ಈ ಬಗ್ಗೆ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದ ಆರೋಪಿಗಳನ್ನು ಬಾಲ ನ್ಯಾಯಮಂಡಳಿಗೆ ಒಪ್ಪಿಸಲಾಗಿದೆ. ಹೆಣ್ಣು ಮಗುವಿಗೆ ಸರಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
Next Story





