ಇಂದಿನಿಂದ ಇ-ಜಾಲರಿ ವಿತರಣೆ
ಶಿಡ್ಲಘಟ್ಟ, ಜ.29: ರೇಷ್ಮೆಗೂಡು ಉತ್ಪಾದನೆ ಮಾಡುವಂತಹ ರೈತರುಗಳ ಬಹುದಿನಗಳ ಬೇಡಿಕೆಯಾಗಿದ್ದ ಇ-ಬಿನ್(ಜಾಲರಿ) ವಿತರಣೆ ಜ.30 ರಿಂದ ಆರಂಭವಾಗಲಿದೆ ಎಂದು ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಎಚ್.ಆರ್. ಪ್ರಭಾಕರ್ ಹೇಳಿದ್ದಾರೆ.
ನಗರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಸಾವಿರಾರು ಲಾಟುಗಳಲ್ಲಿ ಗೂಡು ಬರುತ್ತಿದ್ದು, ಈ ಹಿಂದೆ ದೂರದ ಊರುಗಳಿಂದ ಬರುತ್ತಿರುವ ರೈತರಿಗೆ ಜಾಲರಿಗಳು ಸಿಗದೆ, ನೆಲದ ಮೇಲೆ ಗೂಡನ್ನು ಹಾಕುವಂತಹ ಪರಿಸ್ಥಿತಿಯಿತ್ತು. ಕೆಲವು ಮಂದಿ ಮಧ್ಯವರ್ತಿಗಳು ಜಾಲರಿಗಳ ಮೇಲೆ ಹೆಸರುಗಳನ್ನು ಬರೆದು, ಅವುಗಳನ್ನು ರೈತರಿಗೆ ಮಾರಾಟ ಮಾಡಿಕೊಳ್ಳುತ್ತಿದ್ದರು. ಇದರಿಂದ ರೈತರಿಗೆ ಅನ್ಯಾಯವಾಗುತ್ತಿತ್ತು.ದ್ದರಿಂದ ಇ-ಬಿನ್(ಜಾಲರಿ) ಪದ್ಧತಿಯನ್ನು ಜಾರಿಗೆ ತರಲಾಗಿದ್ದು, ಜ.30ರಿಂಡಡಿದಲೇ ವಿತರಣೆ ಆರಂಭವಾಗಲಿದೆ, ರೈತರು ತರುವಂತಹ ಗೂಡಿನ ಪ್ರಮಾಣಕ್ಕೆ ತಕ್ಕಂತೆ 50 ಕೆ.ಜಿ.ಗೂಡಿಗೆ ಒಂದು ಬಿನ್‌ನಂತೆ ನೀಡಲಾಗುತ್ತದೆ, ಮಾರುಕಟ್ಟೆಯಲ್ಲಿನ ವಿಭಾಗಗಳಿಗೆ ನದಿಗಳ ಹೆಸರುಗಳನ್ನು ಇಡಲಾಗಿದ್ದು, ಪ್ರತಿ ವಿಭಾಗಕ್ಕೆ ಕೌಂಟರ್, ಹರಾಜು ಕೂಗುವುದು, ತೂಕ ಮಾಡುವುದು, ಟೋಕನ್ ನೀಡುವುದು, ಹರಾಜು ಚೀಟಿಗಳನ್ನು ಕಂಪ್ಯೂಟರ್ ಕೊಠಡಿಗಳಿಗೆ ರವಾನಿಸುವ ವ್ಯವಸ್ಥೆ, ಮಾರುಕಟ್ಟೆ ಶುಲ್ಕ, ರೈತರ ಪಾಸ್‌ಪುಸ್ತಕ ನೋದಾವಣೆ, ಹರಾಜು ಚೀಟಿ ವಿತರಣೆ, ಡಿ.ಟಿ.ಆರ್, ಮುಖ್ಯದ್ವಾರದ ಕಾವಲು, ಮೊದಲಾದ ವ್ಯವಸ್ಥೆಗಳನ್ನು ಮಾಡಲಾಗಿದ್ದು, ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.ಸಂದರ್ಭದಲ್ಲಿ ಜಂಟಿ ನಿರ್ದೇಶಕ ಲಕ್ಷೀಪತಿರೆಡ್ಡಿ, ರೇಷ್ಮೆ ಉಪನಿರ್ದೇಶಕ ಮೋಯಿನುದ್ದೀನ್, ಉಪನಿರ್ದೇಕ ರತ್ನಯ್ಯಶೆಟ್ಟಿ, ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ಬಿ.ಆರ್.ಸುಧಾಕರ್, ಸಿ.ಆರ್.ಆಂಜನೇಯ ರೆಡ್ಡಿ ಉಪಸ್ಥಿತರಿದ್ದರು.





