ದುಬೈಯಲ್ಲಿ ಅಪಘಾತ: ಬೋಳಾರ್‌ನ ಇಬ್ಬರು ಮೃತ್ಯು
ಮಂಗಳೂರು, ಜ. 29: ದುಬೈಯ ರಾಸ್ ಅಲ್ ಖೈಮಾದಲ್ಲಿ ಇಂದು ನಡೆದ ವಾಹನ ಅಪಘಾತದಲ್ಲಿ ಇಬ್ಬರು ಮೃತಪಟ್ಟು ಓರ್ವ ಗಂಭೀರ ಗಾಯಗೊಂಡಿದ್ದಾರೆ.
ಮೃತರನ್ನು ಬೋಳಾರದ ನಿವಾಸಿಗಳಾದ ಸಮೀನಾ (45) ಹಾಗೂ ನಾಝಿಂ (34) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಎಂಜನಿಯರಿಂಗ್ ಕಲಿಯುತ್ತಿರುವ ವಿದ್ಯಾರ್ಥಿಯೋರ್ವ ಗಂಭೀರ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಪಿಕ್‌ನಿಕ್‌ಗೆಂದು ಶುಕ್ರವಾರ ರಾತ್ರಿ ಕಾರಿನಲ್ಲಿ ತೆರಳಿದ್ದ ಏಳು ಮಂದಿಯ ಕುಟುಂಬವೊಂದು ಇಂದು ಬೆಳಗ್ಗೆ ಹಿಂದಿರುಗುವಾದ ರಾಸ್‌ಅಲ್ ಖೈಮಾ ಎಂಬಲ್ಲಿ ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ. ನಾಝಿಂ ಎಂಬವರ ಕಿರಿಯ ಸಹೋದರ ಸುಹೈಲ್ ಎಂಬವರು ಕಾರನ್ನು ಚಲಾಯಿಸುತ್ತಿದ್ದರೆಂದು ಹೇಳಲಾಗಿದ್ದು, ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದು ಈ ಅನಾಹುತ ಸಂಭವಿಸಿದೆ.
Next Story





