ಇಂಗ್ಲೆಂಡ್‌ನ ಟಾಕ್ ಟಾಕ್ ಕಂಪೆನಿಗೆ ವಂಚನೆ ವಿಪ್ರೊದ ಮೂವರು ನೌಕರರ ಬಂಧನ
ಬೆಂಗಳೂರು, ಜ.29: ಇಂಗ್ಲೆಂಡ್ ಮೂಲದ ದೂರ ಸಂಪರ್ಕ ಪಕ್ಷಗಾರ ಟಾಕ್ ಟಾಕ್‌ನ ಗ್ರಾಹಕ ದಾಖಲೆಗಳ ಭದ್ರತಾ ಉಲ್ಲಂಘನೆಗೆ ಸಂಬಂಧಿಸಿ ಕೋಲ್ಕತಾದಲ್ಲಿ ವಿಪ್ರೊ ಸಂಸ್ಥೆಯ ಮೂವರು ನೌಕರರನ್ನು ಬಂಧಿಸಲಾಗಿದೆ. ಈ ಬೆಳವಣಿಗೆಯು ಐಟಿ ಕಂಪೆನಿಯ ಮೇಲೆ ಮಹತ್ವದ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ.
ತಮ್ಮ ದೂರ ಸಂಪರ್ಕ ಸಂಸ್ಥೆಯು ವಿಪ್ರೊದೊಂದಿಗಿನ ಸಂಬಂಧವನ್ನು ಮರುಪರಿಶೀಲಿಸಲಿದೆಯೆಂದು ಟಾಕ್ ಟಾಕ್‌ನ ವಕ್ತಾರರೊಬ್ಬರು ತಿಳಿಸಿದ್ದಾರೆ. ಬ್ರಿಟಿಷ್ ಮಾಧ್ಯಮಗಳು ಬುಧವಾರ ಈ ವರದಿಯನ್ನು ಪ್ರಕಟಿಸಿದ್ದು, ಟಾಕ್ ಟಾಕ್ ಒಂದು ಬೃಹತ್ ಸ್ಥಾಯಿ ಬ್ರಾಡ್‌ಬ್ಯಾಂಡ್ ಹಾಗೂ ಮಾತನಾಡುವ ಟೆಲಿಫೊನಿ ಸೇವಾ ಸಂಸ್ಥೆಯಾಗಿದ್ದು, 1.7 ಬಿಲಿಯನ್ ಪೌಂಡ್ ಆದಾಯವುಳ್ಳದ್ದಾಗಿದೆಯೆಂದು ಹೇಳಿದೆ.
ಟಾಕ್ ಟಾಕ್ ಅಕ್ಟೋಬರ್‌ನಲ್ಲಿ ಭಾರೀ ಸೈಬರ್ ದಾಳಿಯೊಂದರಿಂದ ಕಂಗೆಟ್ಟಿತ್ತು. ಅದು ಸುಮಾರು 1,57,000 ಗ್ರಾಹಕರ ವೈಯಕ್ತಿಕ ಹಾಗೂ ಆರ್ಥಿಕ ವಿವರಗಳು, ಬ್ಯಾಂಕ್ ಖಾತೆಗಳ ವಿವರಗಳನ್ನು ಸೋರಿಕೆ ಮಾಡಿದ ಪ್ರಕರಣವಾಗಿತ್ತು.
ಫೆಬ್ರವರಿ 1 ರಂದು ವಿಪ್ರೊದ ನೂತನ ಸಿಇಒ ಆಗಲಿರುವ ಅಬಿದಾಲಿ ನೀಮುಚ್ವಾಲಾರಿಗೆ ಬಹುಶಃ ಇದು, ಅವರು ಎದುರು ನೋಡುತ್ತಿದ್ದ ರೀತಿಯ ಆರಂಭ ಎನಿಸಲಾರದು. ಅವರು ಬಿಪಿಒ ಕಾರ್ಯಚರಣೆಯ ಆಂತರಿಕ ನಿಯಂತ್ರಣವನ್ನು ಬಿಗಿಗೊಳಿಸಬೇಕಾದೀತು ಹಾಗೂ ಗಿರಾಕಿಗಳ ಕಳವಳವನ್ನು ನಿವಾರಿಸಲು ಹಿರಿಯ ಕಾರ್ಯವಾಹಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಗಬಹುದೆಂಬುದು ಉದ್ಯಮ ವಿಶ್ಲೇಷಕರ ಅಭಿಪ್ರಾಯವಾಗಿದೆ. ಇತರ ಕಂಪೆನಿಗಳ ಬೆಳವಣಿಗೆ ದರಕ್ಕಿಂತ ಹಿಂದೆ ಬಿದ್ದಿರುವ ವಿಪ್ರೊ ಅದನ್ನು ಸುಧಾರಿಸುವತ್ತ ಗಮನ ನೀಡಬೇಕಾದ ಸಮಯದಲ್ಲೇ ಈ ಬೆಳವಣಿಗೆ ನಡೆದಿದೆ.





