ನರ್ಸ್‌ಗಳ ದೂರು ಪರಿಶೀಲನೆಗೆ ಸಮಿತಿ ರಚನೆಗೆ ಆದೇಶ
ಹೊಸದಿಲ್ಲಿ,ಜ.29:ದೇಶಾದ್ಯಂತದ ಖಾಸಗಿ ಆಸ್ಪತ್ರೆಗಳು ಮತ್ತು ಖಾಸಗಿ ನರ್ಸಿಂಗ್ ಹೋಮ್‌ಗಳಲ್ಲಿ ದುಡಿಯುತ್ತಿರುವ ನರ್ಸ್‌ಗಳ ಸೇವಾ ಸ್ಥಿತಿಗಳಿಗೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸಲು ತಜ್ಞರ ಸಮಿತಿಯೊಂದನ್ನು ನಾಲ್ಕು ವಾರಗಳಲ್ಲಿ ರಚಿಸುವಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಕೇಂದ್ರಕ್ಕೆ ಸೂಚಿಸಿದೆ. ತಜ್ಞರ ಸಮಿತಿಯು ಸಲ್ಲಿಸಲಿರುವ ಶಿಫಾರಸುಗಳ ಆಧಾರದಲ್ಲಿ ಕಾನೂನೊಂದನ್ನು ರೂಪಿಸುವ ಬಗ್ಗೆ ಪರಿಶೀಲಿಸುವಂತೆಯೂ ತಿಳಿಸಿದ ನ್ಯಾ.ಎ.ಆರ್.ದವೆ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು, ಖಾಸಗಿ ಆಸ್ಪತ್ರೆಗಳಲ್ಲಿ ನರ್ಸ್‌ಗಳಿಗೆ ಅಗತ್ಯ ಸೌಲಭ್ಯಗಳನ್ನು ಖಚಿತ ಪಡಿಸುವಂತೆ ಕೋರಿ ನರ್ಸ್‌ಗಳ ಸಂಘಟನೆಯೊಂದು ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿಗೊಳಿಸಿತು.
Next Story





