ಉತ್ತರಪ್ರದೇಶ: ಕೇಸರಿ ಉಗ್ರರಿಂದ ವಿಕೃತ ಕೃತ್ಯ

ಕಾನ್ಪುರ: ದಾದ್ರಿ ಘಟನೆಯ ಕರಾಳ ನೆನಪು ಮರೆಯುವ ಮುನ್ನವೇ ಕೇಸರಿ ಉಗ್ರರು ಮತ್ತೆ ಉತ್ತರ ಪ್ರದೇಶದಲ್ಲಿ ಮತ್ತೆ ವಿಕೃತ ಕೃತ್ಯ ಮೆರೆದಿದ್ದಾರೆ.
ಮೂರು ಮಂದಿ ಹಿಂದೂಗಳನ್ನು ಮತಾಂತರ ಮಾಡಿ, ಗೋಮಾಂಸ ತಿನ್ನಿಸಿದ ಆರೋಪದಲ್ಲಿ ವ್ಯಕ್ತಿಯೊಬ್ಬರ ತಲೆ ಬೋಳಿಸಿ, ಚಪ್ಪಲಿ ಮಾಲೆ ಹಾಕಿ ಊರ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಒರಾಯ್ ಪಟ್ಟಣದಲ್ಲಿ ನಡೆದಿದೆ.
ಈ ಸಂಬಂಧ ಬಜರಂಗದಳ ಮುಖಂಡರ ವಿರುದ್ಧ ಸಂತ್ರಸ್ತ ಅವಧೇಶ್ ಸವಿತಾ ದೂರು ನೀಡಿದ್ದಾರೆ. ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಝಾನ್ಸಿ ವಲಯದ ಡಿಐಜಿ ಶರದ್ ಸಚನ್ ಹೇಳಿದ್ದಾರೆ.
"ಶುಕ್ರವಾರ ಮಧ್ಯಾಹ್ನ 200ಕ್ಕೂ ಹೆಚ್ಚು ಮಂದಿ ಬಜರಂಗದಳ ಕಾರ್ಯಕರ್ತರು ಜಲವೂನ್ ಜಿಲ್ಲೆಯ ರಂದಾರ್ ಎಂಬಲ್ಲಿನ ಅವಧೇಶ್ ನಿವಾಸದಿಂದ ಅವರನ್ನು ಎಳೆದು ತಂದು ಜಿಲ್ಲಾಕೇಂದ್ರವಾದ ಒರಾಯ್ ನಗರದಲ್ಲಿ ಮೆರವಣಿಗೆ ನಡೆಸಿದರು" ಎಂದು ಪೊಲೀಸ್ ಮೂಲಗಳು ಹೇಳಿವೆ.
"ಆತನ ತಲೆ, ಹುಬ್ಬು, ಮೀಸೆ ಬೋಳಿಸಿ, ಚಪ್ಪಲಿ ಹಾರ ಹಾಕಿ ನಗರದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು" ಎಂದು ಮೂಲಗಳು ಹೇಳಿವೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಅವಧೇಶ್‌ಗೆ ರಕ್ಷಣೆ ನೀಡಲು ಮುಂದಾದಾಗ ಗುಂಪು, ಪೊಲೀಸ್ ವಶಕ್ಕೆ ನೀಡಲು ನಿರಾಕರಿಸಿತು. ತಕ್ಷಣ ಹಿರಿಯ ಅಧಿಕಾರಿಗಳು ಪಿಎಸಿ ಪಡೆ ಜತೆ ಆಗಮಿಸಿ, ಒರಾಯ್ ಕೊತ್ವಾಲಿ ಠಾಣೆಗೆ ಕರೆಯೊಯ್ದರು.
ಮಿರ್ಜಾಪುರ ಜಿಲ್ಲೆಯ ಕಚ್ವಾಹ ಗ್ರಾಮದಲ್ಲಿ ಮೂವರು ಹಿಂದೂಗಳನ್ನು ಆಮಿಷವೊಡ್ಡಿ ಸತ್ಸಂಗಕ್ಕೆ ಕರೆಯೊಯ್ದು ಅವರನ್ನು ಕ್ರೈಸ್ತಧರ್ಮಕ್ಕೆ ಮತಾಂತರಿಸಲಾಗಿದೆ ಎಂದು ಹಿಂದೂ ಸಂಘಟನೆಗಳು ಆಪಾದಿಸಿವೆ. ಬಲವಂತದ ಮತಾಂತರಕ್ಕೊಳಗಾಗಿದ್ದಾರೆ ಎನ್ನಲಾದ ಸಂಗಮ್ ಜತವ್ ಎಂಬವರನ್ನು ಬಜರಂಗದಳ ಸದಸ್ಯರು ಕರೆ ತಂದು ಸಾರ್ವಜನಿಕರಿಗೆ ಘಟನೆಯನ್ನು ವಿವರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಉತ್ತರಪ್ರದೇಶ: ಕೇಸರಿ ಉಗ್ರರಿಂದ ವಿಕೃತ ಕೃತ್ಯಕಾನ್ಪುರ: ದಾದ್ರಿ ಘಟನೆಯ ಕರಾಳ ನೆನಪು ಮರೆಯುವ ಮುನ್ನವೇ ಕೇಸರಿ ಉಗ್ರರು ಮತ್ತೆ ಉತ್ತರ ಪ್ರದೇಶದಲ್ಲಿ ಮತ್ತೆ ವಿಕೃತ ಕೃತ್ಯ ಮೆರೆದಿದ್ದಾರೆ.ಮೂರು ಮಂದಿ ಹಿಂದೂಗಳನ್ನು ಮತಾಂತರ ಮಾಡಿ, ಗೋಮಾಂಸ ತಿನ್ನಿಸಿದ ಆರೋಪದಲ್ಲಿ ವ್ಯಕ್ತಿಯೊಬ್ಬರ ತಲೆ ಬೋಳಿಸಿ, ಚಪ್ಪಲಿ ಮಾಲೆ ಹಾಕಿ ಊರ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಒರಾಯ್ ಪಟ್ಟಣದಲ್ಲಿ ನಡೆದಿದೆ.ಮುಂದೆ ಓದಿ http://www.varthabharati.in/article/raashtriya/4590
Posted by Vartha Bharati on Saturday, 30 January 2016







