ರೋಹಿತ್ ವೇಮುಲಾ ಜನ್ಮದಿನ; ಉಪವಾಸ ಸತ್ಯಾಗ್ರಹದಲ್ಲಿ ರಾಹುಲ್ ಗಾಂಧಿ ಭಾಗಿ

ಹೈದರಾಬಾದ್, ಜ.30: ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾರ ಇಪ್ಪತ್ತೇಳನೆಯ ಜನ್ಮದಿನದ ಅಂಗವಾಗಿ ಹೈದರಾಬಾದ್ ವಿವಿಯ ಆವರಣದಲ್ಲಿ ವಿದ್ಯಾರ್ಥಿಗಳು ಇಂದು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿದ್ಯಾರ್ಥಿಗಳ ಜೊತೆ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದಾರೆ.
ಇದೇ ವೇಳೆ ವಿವಿಯ ಹಂಗಾಮಿ ಉಪಕುಲಪತಿ ಡಾ.ವಿಪಿನ್ ಶ್ರೀವಾಸ್ತವ್ ರಜೆಯ ಮೇಲೆ ತೆರಳಿದ್ದಾರೆ. ಇದರಿಂದಾಗಿ ಪ್ರಕರಣ ಹೊಸ ತಿರುವು ಪಡೆದಿದೆ.ಈ ಕಾರಣದಿಂದಾಗಿ ಹಿರಿಯ ಪ್ರೊಫೆಸರ‍್ ಡಾ.ಪಾರಿಯಸ್ವಾಮಿ ಮುಂದಿನ ಆದೇಶದ ತನಕ ವಿವಿಯ ಉಪಕುಲಪತಿಯಾಗಿ ಕಾರ್ಯ ನಿರ್ವಹಿಸಲಿದ್ಧಾರೆ.
ರೋಹಿತ್ ಆತ್ಮಹತ್ಯೆಯ ಬಳಿಕ ರಾಹುಲ್ ಗಾಂಧಿ ಎರಡನೆ ಬಾರಿ ಹೈದರಾಬಾದ್ ವಿವಿಗೆ ಭೇಟಿ ನೀಡಿದ್ದಾರೆ. ಅವರು ಶುಕ್ರವಾರ ರಾತ್ರಿ ಇಲ್ಲಿಗೆ ಆಗಮಿಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನಾ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗಿಯಾಗಿರುವುದಕ್ಕೆ ಎಬಿವಿಪಿ ವಿರೋಧ ವ್ಯಕ್ತಪಡಿಸಿದೆ.
Next Story





