ಕಾಸರಗೋಡು: ಜನ ಜಾಗೃತಾ ಯಾತ್ರೆ

ಕಾಸರಗೋಡು : ಅಸಹಿಷ್ಣುತೆ ಮತ್ತು ಸಮುದಾಯ ಧ್ರುವೀಕರಣದ ವಿರುದ್ಧ ಇಂಡಿಯನ್ ನೇಶನಲ್ ಲೀಗ್ ( ಐ ಎನ್ ಎಲ್ ) ರಾಜ್ಯ ಪ್ರಧಾನ ಕಾರ್ಯದರ್ಶಿ ಎ .ಪಿ ಅಬ್ದುಲ್ ವಹಾಬ್ ನೇತ್ರತ್ವದ ಜನ ಜಾಗೃತಾ ಯಾತ್ರೆ ಜ.30ರಂದು ಸಂಜೆ ಕಾಸರಗೋಡಿನಿಂದ ಪ್ರಯಾಣ ಬೆಳೆಸಲಿದೆ.
ಇಂದು ಸಂಜೆ ನಾಲ್ಕು ಗಂಟೆಗೆ ನಗರದ ಹೊಸ ಬಸ್ ನಿಲ್ದಾಣ ಸಮೀಪ ನಡೆಯುವ ಸಮಾರಂಭದಲ್ಲಿ ಐ ಎನ್ ಎಲ್ ರಾಷ್ಟ್ರೀಯ ಅಧ್ಯಕ್ಷ ಮುಹಮ್ಮದ್ ಸುಲೈಮಾನ್ ಚಾಲನೆ ನೀಡುವರು.
ರಾಜ್ಯ ಅಧ್ಯಕ್ಷ ಎಸ್. ಎ ಪುದಿಯವಳಪ್ಪಿಲ್ ಅಧ್ಯಕ್ಷತೆ ವಹಿಸುವರು. ರಾಜ್ಯ ಮುಖಂಡರಾದ ಬಿ. ಮೂಸಾ ಹಾಜಿ , ಕೆ. ಪಿ ಇಸ್ಮಾಯಿಲ್, ಎನ್. ಕೆ ಅಬ್ದುಲ್ ಅಝೀಝ್ , ಅಜಿತ್ ಕುಮಾರ್ ಅಜಾದ್ , ಜುಬೈರ್ ಪಡುಪ್ಪು ಮೊದಲಾದವರು ಉಪಸ್ಥಿತರಿರುವರು. ಯಾತ್ರೆ ಫೆಬ್ರವರಿ ೧೩ ರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ
ಐ ಎನ್ ಎಲ್ ಜನ ಜಾಗ್ರತಾ ಯಾತ್ರೆಗೆ ಪೂರ್ವಭಾವಿ ಯಾಗಿ ಕಾಸರಗೋಡು ನಗರದಲ್ಲಿ ನಡೆದ ಮೆರವಣಿಗೆ
Next Story





