ಗಾಂಧಿ ಪುಣ್ಯತಿಥಿ: ಗೋವಾದಲ್ಲಿ 'ನಾಥೂರಾಮ್ ಗೋಡ್ಸೆ ' ಕೃತಿ ಬಿಡುಗಡೆ !

ಪಣಜಿ, ಜ.30: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಪುಣ್ಯತಿಥಿ ದಿನವಾದ ಇಂದು ಗಾಂಧಿ ಹಂತಕ 'ನಾಥೂರಾಮ್ ಗೋಡ್ಸೆ' ಕೃತಿ ಗೋವಾದಲ್ಲಿ ಅನವಾರಣಗೊಳ್ಳಲಿದೆ.
ಈ ಕೃತಿಯ ಬಿಡುಗಡೆಗೆ ಈ ಮೊದಲು ಮಾರ್ಗೋವಾದ ರವೀಂದ್ರ ಭವನದಲ್ಲಿ ನಿಗದಿಯಾಗಿತ್ತು. ಆದರೆ ಕೃತಿ ಬಿಡುಗಡೆಯ ಹಿನ್ನೆಲೆಯಲ್ಲಿ ವ್ಯಾಪಕ ಪ್ರತಿಭಟನೆ ಕಂಡು ಬಂದ ಕಾರಣಕ್ಕಾಗಿ ಕೃತಿ ಬಿಡುಗಡೆಗೆ ಅವಕಾಶ ನೀಡದಂತೆ ರವೀಂದ್ರ ಭವನದ ನಿರ್ವಾಹಕರಿಗೆ ದಕ್ಷಿಣ ಜಿಲ್ಲಾ ಜಿಲ್ಲಾಧಿಕಾರಿ ಪ್ರಮೋಧ್ ಶಿಂದೆ ಆದೇಶ ನೀಡಿದ್ಧಾರೆ.
ಅನುಪಮ್ ಸರ್ದೆಸಾಯ್ ಬರೆದ ಈ ಕೃತಿಯನ್ನು ಬಿಜೆಪಿ ನಾಯಕ ಹಾಗೂ ರವೀಂದ್ರ ಭವನದ ಅಧ್ಯಕ್ಷ ದಾಮೋದರ‍್ ನಾಯ್ಕ್ ಬಿಡುಗಡೆಗೊಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ರವೀಂದ್ರ ಭವನದಲ್ಲಿ ಕೃತಿ ಬಿಡುಗಡೆಗೆ ಜಿಲ್ಲಾಧಿಕಾರಿ ಅವಕಾಶ ನಿರಾಕರಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಕೃತಿ ಬಿಡುಗಡೆಗೊಳ್ಳಲಿದೆ ಎಂದು ಅನುಪಮ್ ಸರ್ದೆಸಾಯ್ ತಿಳಿಸಿದ್ದಾರೆ.
Next Story





