'ಸಹಬಾಳ್ವೆ ಸಾಗರ' ಜಾತ್ಯಾತೀತ ಸಮಾಜ-ಧಾರ್ಮಿಕ ಸಹಬಾಳ್ವೆ ಕಾರ್ಯಕ್ರಮ

ಮಂಗಳೂರು: ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ವತಿಯಿಂದ ನಗರದ ಪುರಭವನದಲ್ಲಿ ನಡೆಯುತ್ತಿರುವ ಸಹಬಾಳ್ವೆ ಸಾಗರ ರಾಷ್ಟ್ರೀಯ ಸಮಾವೇಶದಲ್ಲಿ ನಾರಾಯಣ ಗುರು ವೇದಿಕೆಯಲ್ಲಿ ಜಾತ್ಯಾತೀತ ಸಮಾಜ-ಧಾರ್ಮಿಕ ಸಹಬಾಳ್ವೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಾಹಿತಿ ಚಂದ್ರಶೇಖರ ಪಾಟೀಲ್ (ಚಂಪಾ) ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಹೊಸದುರ್ಗ ಸಾಣೆಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ, ಫಾ. ವಿಲಿಯಂ ಮಾರ್ಟಿಸ್, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಕೆ.ಫಣಿರಾಜ್, ಸೆಬಾಸ್ಟಿಯನ್ ದೇವರಾಜ್ ಕೃಷ್ಣಾಪುರ, ಚೊಕ್ಕಬೆಟ್ಟು ಧರ್ಮಗುರು ಅಬ್ದುಲ್ ಅಝೀಝ್ ದಾರಿಮಿ ಉಪಸ್ಥಿತರಿದ್ದರು.
Next Story





