Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಂಗಳೂರು : ಧರ್ಮದ ಹೆಸರಿನ...

ಮಂಗಳೂರು : ಧರ್ಮದ ಹೆಸರಿನ ರಾಷ್ಟ್ರೀಯತೆಯಿಂದ ದೇಶದ ಪ್ರಜಾಪ್ರಭುತ್ವ, ಬಹುತ್ವಕ್ಕೆ, ಅಪಾಯ -ನಾಡೋಜ ಬರಗೂರು ರಾಮಚಂದ್ರಪ

ವಾರ್ತಾಭಾರತಿವಾರ್ತಾಭಾರತಿ30 Jan 2016 4:50 PM IST
share

ಸಹಬಾಳ್ವೆ ಸಾಗರ ರಾಷ್ಟ್ರೀಯ ಸಮಾವೇಶ ಉದ್ಘಾಟನಾ ಗೋಷ್ಠಿ

ಮಂಗಳೂರು.ಜ.(ಸಿರಿ ವೇದಿಕೆ)30:ಧರ್ಮದ ಹೆಸರಿನ ರಾಷ್ಟ್ರೀಯತೆಯಿಂದ ದೇಶದ ಪ್ರಜಾಪ್ರಭುತ್ವ, ಬಹುತ್ವಕ್ಕೆ, ಅಪಾಯಕಾರಿಯಾಗಿದೆ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ತಿಳಿಸಿದರು.

ಅವರು ಕರ್ನಾಟಕ ಕೋಮು ಸೌರ್ಹಾದ ವೆದಿಕೆಯ ಕೇಂದ್ರ ಸಮಿತಿಯ ವತಿಯಿಂದ ನಗರದ ಪುರಭವನದಲ್ಲಿ ಇಂದು ಹಮ್ಮಿಕೊಂಡ ಸಹಬಾಳ್ವೆ ಸಾಗರ ರಾಷ್ಟ್ರೀಯ ಸಮಾವೇಶದ ಪ್ರಥಮ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
                          ಧರ್ಮದ ಹೆಸರಿನ ರಾಜಕಾರಣ ಮತ್ತು ದೇಗುಲೀಕರಣ ಧರ್ಮವನ್ನು ಅಪ ವ್ಯಾಖ್ಯಾನ ಮಾಡಿಕೊಂಡಿರುವುದರ ಪರಿಣಾಮವಾಗಿ ಹುಟ್ಟಿಕೊಂಡಿದೆ.ಸಂಸ್ಕೃತಿಯನ್ನು ಧರ್ಮ ಎಂದು ಬಿಂಬಿಸಲಾಗುತ್ತಿದೆ.ಆದರೆ ಇವೆರಡು ಒಂದೆ ಅಲ್ಲ.ಭಾರತದಲ್ಲಿ ಬಹುತ್ವದ ಜೀವನ ವಿಧಾನಗಳಿವೆ .ಭಕ್ತಿ-ಧಾರ್ಮಿಕತೆ ಎಂಬುವುದು ವೈಯಕ್ತಿಕತೆ ಖಾಸಗಿ ತನದ ವ್ಯಾಪ್ತಿಗೆ ಸೇರಿದೆ.ಗಾಂಧಿ ವೈಯಕ್ತಿಕವಾಗಿ ಒಂದು ಧರ್ಮದ ಅನುಯಾಯಿಯಾಗಿದ್ದರೂ ರಾಷ್ಟ್ರೀಯತೆಯ ಹೋರಾಟದಲ್ಲಿ ಅವರು ಅದನ್ನುಬಳಸಿಲ್ಲ.ಬದಲಾಗಿ ಉಪ್ಪು,ಖಾದಿ,ಚರಕದಂತಹ ಸಂಕೇತಗಳನ್ನು ರಾಷ್ಟ್ರೀಯ ಚಳವಳಿಗೆ ಬಳಸಿಕೊಂಡರು.ಧರ್ಮವನ್ನು ಒಂದು ಸಂಸ್ಥೆಯಾಗಿಸುವುದನ್ನು ಸ್ವಾಮಿ ವಿವೇಕಾನಂದರೂ ವಿರೋಧಿಸಿದ್ದರು.ಧಾರ್ಮಿಕತೆಯನ್ನೆ ರಾಷ್ಟ್ರೀಯತೆ ಎನ್ನುತ್ತಿರುವ ಈ ಕಾಲಘಟ್ಟದಲ್ಲಿ ಸಮಾಜ ಮುಖಿ ಆಶಯದ,ಈ ದೇಶದ ಸೌರ್ಹಾದ ಸಂಸ್ಕೃತಿ ಯನ್ನು ಬಿಟ್ಟು ಕೊಡದ ,ಸಾಮಜಿಕ ಕ್ರೀಯ ಶೀಲ ಬದ್ಧತೆ ಯೊಂದಿಗೆ ಸೈದಾಂತಿಕ ಸಂಘರ್ಷವನ್ನು ಉಳಿಸಿಕೊಂಡು ಸಹಬಾಳ್ವೆ ಸಮಾವೇಶ ನಡೆಸುತ್ತುರುವುದು ಔಚಿತ್ಯ ಪೂರ್ಣವಾಗಿದೆ ಎಂದು ಬರಗೂರು ರಮಚಂದ್ರಪ್ಪ ತಿಳಿಸಿದರು.
            ಜಾಗತೀಕರಣದ ಹೆಸರಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಒಂದು ಜೋಕ್ :-ಜಾಗತೀಕರಣ ಹೆಸರಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಒಂದು ಜೋಕ್.ಜನಸಾಮನ್ಯರ ಪಾಲುಗಾರಿಕೆಯೆ ಇಲ್ಲದೆ,ಬಂಡವಾಳ ಶಾಹಿಗಳ ,ಕೋಟ್ಯಾಧಿಪತಿಗಳ ಹಿತಾಸಕ್ತಿಯ ಪರವಾಗಿ ನಡೆಯುತ್ತಿರುವ ಅಭಿವೃದ್ಧಿ ಪ್ರಕ್ರೀಯೆಯ ಲ್ಲಿ ಜನಸಾಮಾನ್ಯರು ಪಾಲ್ಗೊಳ್ಳುವ ಸ್ವಾತಂತ್ರವೂ ಇಲ್ಲದಿರುವುದರಿಂದ ಇದೊಂದು ಜೋಕ್ ಎಂದು ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಟೀಕಿಸಿದರು.
    ದೇಶದ ಆರ್ಥಿಕ ,ಸಾಮಾಜಿಕ ಸಂರಚನೆಯಲ್ಲಿಯೆ ಹಿಂಸೆ ಇದೆ:-ದೇಶದ ಆರ್ಥಿಕ ,ಸಾಮಾಜಿಕ ಸಂರಚನೆಯಲ್ಲಿಯೆ ಹಿಂಸೆ ಒಳಗೊಂಡಿದೆ.ಪ್ರಸಕ್ತ ಧರ್ಮದ ಹೆಸರಿನಲ್ಲಿ ವ್ಯಕ್ತವಾಗುತ್ತಿರುವ ಅಸಹಿಷ್ಣುತೆಗೆ ಇತಿಹಾಸವಿದೆ.ಆದರೆ ಆ ಇತಿಹಾಸವನ್ನು ಗಮನಿಸಿದಾಗ ಅಲ್ಲಿ ಅಸಹಿಷ್ಣುತೆ ವಿರುದ್ಧವಾಗಿ ಬೆಳೆದು ಬಂದ ಸಹಿಷ್ಣುತೆಗಳ ಮಾದರಿಗಳು ಕಂಡು ಬರುತ್ತವೆ.ರಾಜಶಾಹಿ ವ್ಯವಸ್ಥೆಯ ಕಾಲದಲ್ಲಿಯೂ ಸೌರ್ಹಾದತೆಯ ಮಾದರಿಗಳು ಇದ್ದವು .ಪ್ರಜಾಪ್ರಭುತ್ವ ಜಾರಿಯಾದ ಬಳಿಕವೂ ಈ ರೀತಿಯ ಅಸಹಿಷ್ಣುತೆ ಜೀವಂತವಾಗಿರುವುದಕ್ಕೆ ಇಲ್ಲಿನ ಅಧಿಕಾರದಲ್ಲಿರುವವರು ಕಾರಣರಾಗುತ್ತಾರೆ.ಪ್ರಜಾ ಪ್ರಭುತ್ವದಲ್ಲಿ ಬಹುಮತ ಅಧಿಕಾರದ ಮದಕ್ಕೆ ಕಾರಣವಾಗಬಾರದು. ಜಾಗತೀಕರಣ, ದೇಗುಲೀಕರಣ ಮನಮೋಹನ ಸಿಂಗ್,ನರಸಿಂಹರಾಯರ ಕೊಡುಗೆಯಾಗಿದ್ದರೆ.ಅದನ್ನು ಈ ಶತಮಾನದಲ್ಲಿ ಜನಸಾಮನ್ಯರು ಸಂಕಟಪಡುವಂತೆ ಜಾಗೃತಗೊಳಿಸಿರುವುದು ಮೋದಿಯ ಆಡಳಿತವಾಗಿದೆ ಎಂದು ಬರಗೂರು ತಿಳಿಸಿದರು.
             ಗಾಂಧಿಯನ್ನು ಹತ್ಯೆಗೈದಿರುವುದು ಈ ದೇಶದ ಆತ್ಮ ಸಾಕ್ಷಿಯನ್ನು ಹತ್ಯೆಗೈದಂತೆ.ಆ ಕೌರ್ಯದ ದಿನವನ್ನು ಒಂದು ಶೌರ್ಯದ ದಿನವನ್ನಾಗಿ ಆಚರಿಸುತ್ತಿರುವುದವವರು ಗೋಡ್ಸೆಯನ್ನು ನೇತಾರನನ್ನಾಗಿ ಮಾಡಿದ್ದಾರೆ.ಧಾರ್ಮಿಕ ಭಯೋತ್ಪಾದನೆ, ಮೂಲಭೂತವಾದ ವಿಜೃಂಭಿಸುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಗಾಂಧಿ, ಅಂಬೇಡ್ಕರ್,ಲೋಹಿಯಾ,ಮಾವೋ,ಮಾರ್ಕ್ಸ್ ವಾದಗಳು ನಮ್ಮ ನಡುವೆ ಒಂದು ಕಡೆ ಸೇರಬೇಕಾದ ವಾತವರಣ ಸೃಷ್ಟಿಯಾಗಿದೆ .ಧರ್ಮ,ಸಂಸ್ಕೃತಿಯ ಅಪವ್ಯಾಖ್ಯಾನ ತಡೆಯಬೇಕಾಗಿದೆ.ಎಲ್ಲಾ ಧರ್ಮಗಳು ಸೌರ್ಹಾದತೆಯ ಸಾಧನವಾಗಬೇಕು.ದೇವರ ಹೆಸರಿನ ಶೋಷಣೆಯನ್ನು ತಡೆಯಬೇಕಾಗಿದೆ.ವೇಮುಲಾ ಆತ್ಮಹತ್ಯೆ ಈ ನಾಡಿನಲ್ಲಿ ಅಮಾನವೀಯತೆಯಿಂದ ಸಾಮಾಜಿಕ ಖಿನ್ನತೆಗೊಳಗಾಗಿ ಶೋಷಣೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಲಕ್ಷಾಂತರ ಜನಸಮೂಹದ ಪ್ರತೀಕವಾದ ಒಂದು ಉದಾಹರಣೆ ಎಂದು ಬರಗೂರು ತಿಳಿಸಿದರು.
     ಸಮಾರಂಭದ ಅಧ್ಯಕ್ಷತೆಯನ್ನು ಕ.ಕೋ.ಸೌರ್ಹಾದ ವೇದಿಕೆಯ ದ.ಕ ಜಿಲ್ಲಾಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲ್ ವಹಿಸಿದ್ದರು.ರಾಬಿನ್ ಕ್ರಿಸ್ಟೋಫರ್ ಪ್ರಾಸ್ತಾವಿಕ ಮಾತು ಗಳನ್ನಾಡಿದರು. ಸಮಾರಂಭದಲ್ಲಿ ಮಾನವಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾದ್ ,ಪತ್ರಕರ್ತೆ ಗೌರಿ ಲಂಕೇಶ್,ಸಾಹಿತಿ ಚಂದ್ರ ಶೇಖರ ಪಾಟೀಲ,ಹೆಚ್.ಎಲ್.ಕೇಶವ ಮೂರ್ತಿ ,ನಗರಿ ಬಾಬಯ್ಯ,ಪಿಯುಸಿಎಲ್ ಮುಖಂಡ ಪಿ.ಬಿ.ಡೇಸಾ,ಶ್ಯಾಮರಾಜ ಬೀರ್ತಿ ಮೊದಲಾದವರು ಉಪಸ್ಥಿತರಿದ್ದರು.ಸಮಿತಿಯ ಪ್ರಧಾನ ಕಾರ್ಯದರ್ಶಿ ಉಮ್ಮರ್ ಯು.ಎಚ್.ಸ್ವಾಗತಿಸಿದರು.ಗೋಷ್ಠಿಯಲ್ಲಿ ಕೊರಲ್ ಕಲಾ ತಂಡ ಡೋಲು ವಾದನ ದೊಂದಿಗೆ ಕಾರ್ಯಕ್ರಮ ಪ್ರದರ್ಶಿಸಿದರು.ಬರಗೂರು ಡೋಲು ಬಾರಿಸಿ ಗೋಷ್ಠಿಗೆ ಶುಭಹಾರೈಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X