ಮಂಗಳೂರು, ಯೋಗ ಚಿಕಿತ್ಸೆಯ ಬಗ್ಗೆ ಅಂತರಾಷ್ಟ್ರೀಯ ಕಾರ್ಯಾಗಾರ;
ಮಂಗಳೂರು ಜ, 30; ಮಂಗಳೂರು ವಿಶ್ವವಿದ್ಯಾನಿಲಯದ ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗ ಹಾಗೂ ಧರ್ಮನಿಧಿಯೋಗ ಪೀಠಗಳು ಯೋಗ ಚಿಕಿತ್ಸೆಯ ಬಗ್ಗೆ ಅಂತರಾಷ್ಟ್ರೀಯ ಕಾರ್ಯಾಗಾರವನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಫೆ. 2 ರಿಂದ 5 ರವರೆಗೆ ಏರ್ಪಡಿಸಿದೆ. ಕಾರ್ಯಗಾರದಲ್ಲಿ ದಕ್ಷಿಣ ಕೊರಿಯಾದ 21 ಪ್ರತಿನಿಧಿಗಳು ಹಾಗೂ ಭಾರತೀಯ ಪ್ರತಿನಿಧಿಗಳು ಭಾಗವಹಿಸುವರು. ವಿಭಾಗವು ಆಯೋಜಿಸುತ್ತಿರುವ 4 ನೇ ಅಂತರಾಷ್ಟ್ರೀಯ ಕಾರ್ಯಾಗಾರವಾಗಿದೆ.
ಫೆ. 2 ರಂದು ಬೆಳಿಗ್ಗೆ 9.30 ಕ್ಕೆ ವಿಶ್ವವಿದ್ಯಾನಿಲಯದ ಹಳೇ ಸೆನೆಟ್ ಸಭಾಂಗಣದಲ್ಲಿ ದ.ಕ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಕಾರ್ಯಾಗಾರ ಉದ್ಘಾಟನೆಯನ್ನು ಮಾಡುವರು. ದಕ್ಷಿಣ ಕೊರಿಯಾದ ವಾಂಕ್ ವಾಂಗ್ ಡಿಜಿಟಲ್ ಯುನಿವರ್ಸಿಟಿಯ ಪ್ರೊವೋಸ್ಟ್ ಆದ ಪ್ರೊ.ಜಾಂಗ್ ಸುನ್‌ಸಿಯೋ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
Next Story





