ನ್ಯೂಯಾರ್ಕ್ : ಖಾಸಗಿ ವ್ಯಕ್ತಿಗಳು ಬಂದೂಕು ಮಾರಾಟದ ಜಾಹೀರಾತುಗಳಿಗೆ ಫೇಸ್ ಬುಕ್ ಜಾಲತಾಣದಲ್ಲಿ ಅವಕಾಶವಿಲ್ಲ

ನ್ಯೂಯಾರ್ಕ್.ಜ.30: ಖಾಸಗಿ ವ್ಯಕ್ತಿಗಳು ಬಂದೂಕು ಮಾರಾಟದ ಜಾಹೀರಾತುಗಳನ್ನು ನೀಡಲು ಫೇಸ್ ಬುಕ್ ಜಾಲತಾಣದಲ್ಲಿ ಅವಕಾಶ ನೀಡುವುದಿಲ್ಲ ಎಂದು ಫೇಸ್ ಬುಕ್ ಹೇಳಿದೆ. ಈಗಾಗಲೇ ಸೂಕ್ತ ವಿಳಾಸದ ಮಾಹಿತಿ ಇಲ್ಲದೇ ಬಂದೂಕು ಮಾರಾಟದ ಜಾಹೀರಾತು ಪ್ರಕಟಿಸಲು ನಿರ್ಬಂಧ ಇತ್ತು. ಇದೀಗ ಹೊಸ ನಿಯಮದ ಪ್ರಕಾರ ಎಲ್ಲಾ ರೀತಿಯ ಬಂದೂಕು ಮಾರಾಟದ ಜಾಹೀರಾತು ನೀಡಲು ಖಾಸಗಿ ವ್ಯಕ್ತಿಗಳಿಗೆ ನಿಷೇಧ ಹೇರಲಾಗಿದೆ. ಮೂರು ವಾರಗಳ ಹಿಂದೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಬಂದೂಕು ಖರೀದಿಗೆ ಹೊಸ ನಿರ್ಬಂಧಗಳನ್ನು ಹೇರಿದ್ದರು.
Next Story