ಕುವೈಟ್ ನಿಂದ ಭಾರತೀಯರನ್ನು ನಿಜವಾಗಿ ರಕ್ಷಿಸಿದ್ದು ಯಾರು ?
ಇತ್ತೀಚಿಗೆ ಬಿಡುಗಡೆಯಾದ ಅಕ್ಷಯ್ ಕುಮಾರ್ ಪ್ರಮುಖ ಪಾತ್ರದಲ್ಲಿರುವ ಏರ್ಲಿಫ್ಟ್ ದಿನಕ್ಕೊಂದು ವಿವಾದಕ್ಕೊಳಗಾಗಿದೆ. ಕುವೈಟ್ ಮೇಲೆ ಇರಾಕ್ ದಾಳಿ ನಡೆಸಿದಾಗ ಕುವೈಟ್ ನಲ್ಲಿದ್ದ ಒಂದು ಲಕ್ಷ ಎಪ್ಪತ್ತು ಸಾವಿರ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತರುವ ಕತೆಯಿರುವ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ (ಅನಿವಾಸಿ ಭಾರತೀಯ ಉದ್ಯಮಿ ರಂಜಿತ್ ಕತ್ಯಾಲ್ ) ಒಬ್ಬರೇ ಈ ಸಾಹಸ ಮಾಡಿದರು . ಅವರಿಗೆ ಆಗಿನ ಭಾರತ ಸರಕಾರ ಹಾಗು ವಿದೇಶಾಂಗ ಇಲಾಖೆ ಸರಿಯಾಗಿ ಸ್ಪಂದಿಸಲಿಲ್ಲ ಎಂಬಂತೆ ತೋರಿಸಲಾಗಿದೆ. ಈ ಬಗ್ಗೆ ಈಗ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ಸಿಎನೆನ್ ಐಬಿಎನ್ ಸುದ್ದಿ ವಾಹಿನಿಯ ರೀನಾ ಭಾರಧ್ವಾಜ್ ಅವರ ತಂದೆ ಇರಾಕ್ ದಾಳಿ ಸಂದರ್ಭದಲ್ಲಿ ಕುವೈಟ್ ನಲ್ಲೇ ಉದ್ಯೋಗದಲ್ಲಿದ್ದರು. ಆಗ ಏನೇನಾಯಿತು ಎಂಬುದನ್ನು ಅವರ ಬಾಯಿಂದಲೇ ಕೇಳಿ !
ಕೃಪೆ : CNN-IBN
Next Story





