ರಶ್ಯದಲ್ಲಿ ಪ್ರಬಲ ಭೂಕಂಪ ಸಾವು-ನೋವಿಲ್ಲ
ಮಾಸ್ಕೊ, ಜ. 30: ರಿಕ್ಟರ್ ಮಾಪಕದಲ್ಲಿ 7ರ ತೀವ್ರತೆ ಹೊಂದಿದ್ದ ಪ್ರಬಲ ಭೂಕಂಪ ಪೂರ್ವ ರಶ್ಯದಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ ಎಂದು ಅಮೆರಿಕ ಮತ್ತು ರಶ್ಯದ ಅಧಿಕಾರಿಗಳು ಹೇಳಿದ್ದಾರೆ. ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ.
ರಶ್ಯದ ಪೂರ್ವ ಕರಾವಳಿಯ ಕಂಚಟ್ಕ ಕ್ರಾಯ್ ಗುಡ್ಡಗಾಡು ಪ್ರದೇಶದಲ್ಲಿ 160 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯಾಲಜಿಕಲ್ ಸರ್ವೇ ಹೇಳಿದೆ.
ಮೊದಲ ಭೂಕಂಪ ಸಂಭವಿಸಿದ ನಿಮಿಷಗಳ ಬಳಿಕ 5.2ರ ತೀವ್ರತೆಯ ಎರಡನೆ ಕಂಪನ ಸಂಭವಿಸಿತು ಎಂದು ರಶ್ಯನ್ ಅಕಾಡಮಿ ಆಫ್ ಸಯನ್ಸಸ್ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ.
ಭೂಕಂಪದಿಂದ ಸುನಾಮಿಯ ಭಯವಿಲ್ಲ ಎಂದು ರಾಷ್ಟ್ರೀಯ ಮತ್ತು ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರಗಳು ಹೇಳಿವೆ.
Next Story





