36 ದಿನಗಳ ಬಳಿಕ ಗಣಿ ಕಾರ್ಮಿಕರ ರಕ್ಷಣೆ
ಶಾಂೈ(ಚೀನಾ), ಜ. 30: ಚೀನಾದ ಜಿಪ್ಸಂ ಗಣಿಯೊಂದು ಕುಸಿದು 36 ದಿನಗಳ ಕಾಲ ಒಳಗೆ ಸಿಕ್ಕಿಹಾಕಿಕೊಂಡಿದ್ದ ನಾಲ್ವರು ಕಾರ್ಮಿಕರನ್ನು ಶುಕ್ರವಾರ ಪವಾಡ ಸದೃಶವಾಗಿ ರಕ್ಷಿಸಲಾಗಿದೆ.
200 ಮೀಟರ್ ಆಳದಲ್ಲಿ ಸಿಕ್ಕಿಹಾಕಿಕೊಂಡಿದ್ದ ಕಾರ್ಮಿಕರನ್ನು ರಕ್ಷಿಸು ಅಂತಿಮ ಕಾರ್ಯಾಚರಣೆ ಎರಡು ಗಂಟೆ ನಡೆಯಿತು. ಅವರನ್ನು ರಕ್ಷಣಾ ‘ಕ್ಯಾಪ್ಸೂಲ್’ನಲ್ಲಿ ಒಬ್ಬರ ಬಳಿಕ ಒಬ್ಬರಂತೆ ಮೇಲಕ್ಕೆ ಎತ್ತಲಾಯಿತು.
Next Story





