ಕರ್ನಾಟಕ ಒನ್ ಕೇಂದ್ರಗಳ ಕೆಲಸದ ವೇಳೆ ಬದಲು
ಬೆಂಗಳೂರು, ಜ. 30: ರಾಜ್ಯದ ಎಲ್ಲ್ಲ ಕರ್ನಾಟಕ ಒನ್ ಕೇಂದ್ರ ಗಳ (ಬೆಳಗಾವಿ ಒನ್, ಬಳ್ಳಾರಿ ಒನ್, ದಾವಣಗೆರೆ ಒನ್, ಕಲಬುರಗಿ ಒನ್, ಹುಬ್ಬಳ್ಳಿ-ಧಾರವಾಡ ಒನ್, ಮಂಗಳೂರು ಒನ್, ಮೈಸೂರು ಒನ್, ಶಿವಮೊಗ್ಗ ಒನ್ ಮತ್ತು ತುಮಕೂರು ಒನ್) ಕೆಲಸದ ವೇಳೆ ಜ.1ರಿಂದ ಬದಲಾವಣೆಯಾಗಿದೆ.
ಕರ್ನಾಟಕ ಒನ್ ಕೇಂದ್ರಗಳು ಮೊದಲನೆಯ ಶಿಫ್ಟ್‌ನಲ್ಲಿ ಬೆಳಗ್ಗೆ 8ಗಂಟೆಯಿಂದ ಮಧ್ಯಾಹ್ನ 1:30ರ ವರೆಗೆ ಹಾಗೂ 2ನೆ ಶಿಫ್ಟ್‌ನಲ್ಲಿ ಮಧ್ಯಾಹ್ನ 2ಗಂಟೆಯಿಂದ ಸಂಜೆ 7ಗಂಟೆ ವರೆಗೆ ವರ್ಷದ ಎಲ್ಲ್ಲ ದಿನಗಳೂ ಕಾರ್ಯನಿರ್ವಹಿಸುವವು (ಸ್ವತಂತ್ರ ದಿನಾಚರಣೆ, ಗಣರಾಜ್ಯೋತ್ಸವ ಮತ್ತು ಚುನಾವಣೆ ಮತ ಚಲಾಯಿಸುವ ದಿನ ಹೊರತುಪಡಿಸಿ)ನಾಗರಿಕರು ಈ ಬದಲಾವಣೆಯನ್ನು ಪರಿಗಣಿಸಿ ಕರ್ನಾಟಕ ಒನ್ ಕೇಂದ್ರಗಳಲ್ಲಿ ಸೇವೆಯನ್ನು ಪಡೆಯಲು ಕೋರಲಾಗಿದೆ.
Next Story





