ಹೋಂ ಕೇರ್ ನರ್ಸಿಂಗ್ ತರಬೇತಿ ಶಿಬಿರ
ಬೆಂಗಳೂರು, ಜ. 30: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 18 ರಿಂದ 35 ವರ್ಷದ ಯುವತಿಯರಿಗಾಗಿ ಸ್ವಯಂ ಉದ್ಯೋಗ ಯೋಜನೆಯಡಿ ಹೋಂ ಕೇರ್ ನರ್ಸಿಂಗ್ ತರಬೇತಿಯನ್ನು ಫೆ.11ರಿಂದ 25ರ ವರೆಗೆ ಬೆಂಗಳೂರಿನ ನೃಪತುಂಗ ರಸ್ತೆಯ, ರಾಜ್ಯ ಯುವ ಕೇಂದ್ರದಲ್ಲಿ ಏರ್ಪಡಿಸಿದೆ.
ನೋಂದಣಿ ಶುಲ್ಕ 500 ರೂ.ಗಳಾಗಿದ್ದು, ಆಸಕ್ತ ಯುವತಿಯರು ತಮ್ಮ ಜನ್ಮ ದಿನಾಂಕದ ದಾಖಲೆಯಾದ ಎಸೆಸೆಲ್ಸಿ ಅಂಕಪಟ್ಟಿಯೊಂದಿಗೆ ಇಲಾಖೆಯ ಅಂತರ್ಜಾಲದಲ್ಲಿ ಹೆಸರು ನೋಂದಾಯಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಅಂತರ್ಜಾಲ www. karnatakayouthportal.in ಹಾಗೂ ದೂರವಾಣಿ ಸಂಖ್ಯೆ 080-2221 4911ಅನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು.
Next Story





