ರೋಹಿತ್ ಆತ್ಮಹತ್ಯೆ ಪ್ರಕರಣ: ರಜೆಯಲ್ಲಿ ತೆರಳಿದ ಹೈದರಾಬಾದ್ ವಿವಿ ಪ್ರಭಾರ ಕುಲಪತಿ

ಹೈದರಾಬಾದ್, ಜ.30: ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾರ ಆತ್ಮಹತ್ಯೆ ಕುರಿತು ನಡೆಯುತ್ತಿರುವ ಪ್ರತಿಭಟನೆಗಳ ನಡುವೆಯೇ ಉಪಕುಲಪತಿ ಅಪ್ಪಾರಾವ್ ರಜೆಯಲ್ಲಿ ತೆರಳಿದ ಬೆನ್ನಲ್ಲೇ ಪ್ರಭಾರ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ್ದ ಡಾ.ವಿಪಿನ್ ಶ್ರೀವಾಸ್ತವ ಅವರೂ ಇದೀಗ ಶನಿವಾರ ಮಧ್ಯಾಹ್ನದಿಂದ ರಜೆಯ ಮೇಲೆ ತೆರಳಿದ್ದಾರೆ. ಈ ವಿಷಯವನ್ನು ತಿಳಿಸಿದ ವಿವಿಯ ಅಧಿಕಾರಿಯೋರ್ವರು, ಶ್ರೀವಾಸ್ತವ ಅವರ ರಜೆಗೆ ಕಾರಣಗಳು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ ಎಂದರು.
ಮುಂದಿನ ಆದೇಶದವರೆಗೆ ಅತ್ಯಂತ ಹಿರಿಯ ಪ್ರೊಫೆಸರ್ ಆಗಿರುವ ಡಾ.ಎಂ.ಪೆರಿಯಸ್ವಾಮಿ ಅವರು ಕುಲಪತಿಯ ಕಾರ್ಯಭಾರವನ್ನು ನಿರ್ವಹಿಸಲಿದ್ದಾರೆ ಎಂದರು. ಕುಲಪತಿ ಅಪ್ಪಾರಾವ್ ಪೊಡಿಲೆ ಅವರು ರಜೆಯ ಮೇಲೆ ತೆರಳಿದ ನಂತರ ಜ.24ರಂದು ಶ್ರೀವಾಸ್ತವ ಪ್ರಭಾರ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ್ದರು.
Next Story





