ಮುಝಫ್ಫರ್‌ನಗರ ಗಲಭೆ ಸಂತ್ರಸ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

ಮುಝಫ್ಫರ್‌ನಗರ,ಜ.30: 2013ರ ಮುಝಫ್ಫರ್‌ನಗರ ಕೋಮು ಗಲಭೆಯ ಸಂತ್ರಸ್ತ ಬಾಲಕಿಯೋರ್ವಳ ಮೇಲೆ ಮೂವರು ಯುವಕರು ಸಾಮೂಹಿಕ ಅತ್ಯಾಚಾರಗೈದ ಹೇಯ ಘಟನೆ ಜಿಲ್ಲೆಯ ಅಂಬೆಟಾ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಈ ಬಾಲಕಿಯ ಕುಟುಂಬಕ್ಕೆ ಅಂಬೆಟಾ ಗ್ರಾಮದಲ್ಲಿ ಪುನರ್ವಸತಿ ಕಲ್ಪಿಸಲಾಗಿತ್ತು.
ಗ್ರಾಮದ ಮುಖ್ಯಸ್ಥ ಝಹೀರ್ ಎಂಬಾತನ ಪುತ್ರ ಝುಲ್ಫಾಮ್ ಮತ್ತು ಇತರ ಇಬ್ಬರು ಯುವಕರು ಆರೋಪಿಗಳಾಗಿದ್ದು,ಮೂವರೂ ತಲೆಮರೆಸಿಕೊಂಡಿದ್ದಾರೆ.
ಬಾಲಕಿ ಶುಕ್ರವಾರ ಹೊಲದಿಂದ ಮನೆಗೆ ಮರಳುತ್ತಿದ್ದಾಗ ಆಕೆಯನ್ನು ಹೊತ್ತೊಯ್ದ ಆರೋಪಿಗಳು ಸಾಮೂಹಿಕ ಅತ್ಯಾಚಾರವನ್ನು ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಾಲಕಿ ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಘಟನೆಯ ವಿರುದ್ಧ ಪ್ರತಿಭಟಿಸಿದ ಬಾಲಕಿಯ ಕುಟುಂಬ ಸದಸ್ಯರನ್ನು ಆರೋಪಿಗಳು ಥಳಿಸಿದ್ದಾರೆಂದೂ ಆರೋಪಿಸಲಾಗಿದೆ.
ಲಕಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
Next Story





