ಪಠಾಣ್‌ಕೋಟ್ ದಾಳಿ ಮಾತುಕತೆಯ ಹಳಿ ತಪ್ಪಿಸಿತು: ಶರೀಫ್

ಹೊಸದಿಲ್ಲಿ, ಜ. 30: ಪಠಾಣ್‌ಕೋಟ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತ-ಪಾಕ್ ಮಾತುಕತೆ ಪ್ರಕ್ರಿಯೆ ಹಳಿ ತಪ್ಪಿತು ಎಂದು ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಹೇಳಿದ್ದಾರೆ.
‘‘ಮಾತುಕತೆ ಪ್ರಕ್ರಿಯೆ ಸಾಗುತ್ತಿತ್ತು. ಆದರೆ, ಪಠಾಣ್‌ಕೋಟ್ ದಾಳಿಯು ಅದರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು’’ ಎಂದು ಅವರು ನುಡಿದರು.
ಪಠಾಣ್‌ಕೋಟ್ ಕುರಿತು ನಡೆಸಲಾಗುತ್ತಿರುವ ತನಿಖೆಯನ್ನು ಪಾಕಿಸ್ತಾನ ಶೀಘ್ರವೇ ಮುಗಿಸುತ್ತದೆ ಎಂದು ಶರೀಫ್ ಶನಿವಾರ ಹೇಳಿದರು.
‘‘ದಾಳಿಯಲ್ಲಿ ನಮ್ಮ ನೆಲವನ್ನು ಬಳಸಲಾಗಿದೆಯೇ ಎನ್ನುವುದನ್ನು ತಿಳಿದುಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ನಾವು ಇದನ್ನು ಮಾಡುತ್ತೇವೆ ಹಾಗೂ ಈಗ ಚಾಲ್ತಿಯಲ್ಲಿರುವ ತನಿಖೆ ಶೀಘ್ರ ಮುಕ್ತಾಯಗೊಳ್ಳುತ್ತದೆ’’ ಎಂದು ಶರೀಫ್ ನುಡಿದರು. ಪ್ರಧಾನಿ ಮೋದಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನಕ್ಕೆ ಭೇಟಿ ನೀಡಿದ ಬಳಿಕ, ಭಾರತದೊಂದಿಗಿನ ಮಾತುಕತೆ ‘‘ಸರಿಯಾದ ದಿಕ್ಕಿ’’ನಲ್ಲಿ ಸಾಗುತ್ತಿದೆ ಎಂದು ಶರೀಫ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
Next Story





