ಗಲ್ಫ್ ಮೆಡಿಕಲ್ ಕಾಲೇಜಿಗೆ ಜರ್ಮನಿಯ ನಿಯೋಗ ಭೇಟಿ

ದುಬೈ, ಜ.30: ಜರ್ಮನಿಯ ಹ್ಯಾಂಬರ್ಗ್ ನಗರದ ಗ್ರಾಹಕರ ರಕ್ಷಣಾ ವಿಭಾಗದ ಸಹಾಯಕ ಕಾರ್ಯದರ್ಶಿ ಎಚ್.ಇ.ಎಲ್ಕಿ ಬ್ಯಾಡ್ಡೆ ನೇತೃತ್ವದಲ್ಲಿ ಉನ್ನತಮಟ್ಟದ ನಿಯೋಗವು ಇತ್ತೀಚೆಗೆ ಯುಎಇಯ ತುಂಬೆ ಸಮೂಹ ಸಂಸ್ಥೆಯ ಗಲ್ಫ್ ಮೆಡಿಕಲ್ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದೆ.
ಗಲ್ಫ್ ಮೆಡಿಕಲ್ ವಿವಿಯ ಸ್ಥಾಪಕ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷ ತುಂಬೆ ಮೊಯ್ದಿನ್ ಅತಿಥಿಗಳನ್ನು ಸ್ವಾಗತಿಸಿದರು. ಈ ಸಂದರ್ಭ ತುಂಬೆ ಸಮೂಹ ಸಂಸ್ಥೆಗಳ ಹೆಲ್ತ್‌ಕೇರ್ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದಿನ್ ಉಪಸ್ಥಿತರಿದ್ದರು.
ನಿಯೋಗದಲ್ಲಿ ಹ್ಯಾಂಬರ್ಗ್ ಛೇಂಬರ್ ಆಫ್ ಕಾಮರ್ಸ್‌ನ ಪ್ರೊ.ಡಾ.ಹ್ಯಾನ್ಸ್ -ಜೊರ್ಗ್ ಮತ್ತಿತರರು ಉಪಸ್ಥಿತರಿದ್ದರು.



Next Story







