ಇಂದು ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್ ಫೈನಲ್
ಮೆಲ್ಬೋರ್ನ್, ಜ.30: ವಿಶ್ವದ ನಂ.1 ಟೆನಿಸ್ ಆಟಗಾರ ನೋವಾಕ್ ಜೊಕೊವಿಕ್ ರವಿವಾರ ಇಲ್ಲಿ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್‌ನ ಫೈನಲ್‌ನಲ್ಲಿ ಬ್ರಿಟನ್‌ನ ಆ್ಯಂಡಿ ಮರ್ರೆಯನ್ನು ಎದುರಿಸಲಿದ್ದಾರೆ.
ಮರ್ರೆ ಅವರು ಸೆಮಿಫೈನಲ್‌ನಲ್ಲಿ ಕೆನಡಾದ ಮಿಲೊಸ್ ರಾವೊನಿಕ್ ಅವರನ್ನು ಸೋಲಿಸಿ ಐದನೆ ಬಾರಿ ಫೈನಲ್ ತಲುಪಿದ್ದಾರೆ. ಸರ್ಬಿಯಾದ ಜೊಕೊವಿಕ್ ಈ ಹಿಂದೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡಿದ ಮೂರು ಫೈನಲ್ ಪಂದ್ಯಗಳಲ್ಲೂ ಮರ್ರೆಗೆ ಸೋಲುಣಿಸಿದ್ದಾರೆ. ಮರ್ರೆ ಆರನೆ ಬಾರಿ ಫೈನಲ್ ತಲುಪಿದ್ದಾರೆ. ಆದರೆ ಜೊಕೊವಿಕ್ ಏಳನೆ ಪ್ರಶಸ್ತಿಗೆ ಎದುರು ನೋಡುತ್ತಿದ್ದಾರೆ.
Next Story





