ಕಡಬದಲ್ಲಿ ‘ಹೆಲ್ಮೆಟ್ ಧರಿಸಿ, ಪ್ರಾಣ ಉಳಿಸಿ’ ಜನಜಾಗೃತಿ ಕಾರ್ಯಕ್ರಮ

ಕಡಬ, ಜ.31: ದ.ಕ.ಜಿಲ್ಲಾ ಪೊಲೀಸ್, ಕಡಬ ಪೊಲೀಸ್ ಠಾಣೆ ಹಾಗೂ ಜೇಸಿಐ ಕಡಬ ಕದಂಬ ಮತ್ತು ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಇವುಗಳ ಸಹಯೋಗದಲ್ಲಿ ‘ಹೆಲ್ಮೆಟ್ ಧರಿಸಿ, ಪ್ರಾಣ ಉಳಿಸಿ’ ಜನಜಾಗೃತಿ ಕಾರ್ಯಕ್ರಮವು ಕಡಬ ಪೇಟೆಯಲ್ಲಿ ್ಜರವಿವಾರ ನಡೆಯಿತು.
ಕಡಬ ಪೇಟೆಯಾದ್ಯಂತ ಮೆರವಣಿಗೆಯಲ್ಲಿ ಸಾಗಿದ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವ ಬಗ್ಗೆ ಜನಜಾಗೃತಿ ಮೂಡಿಸಿದರು.
ಕಡಬ ಠಾಣಾಧಿಕಾರಿ ಉಮೇಶ್ ಉಪ್ಪಳಿಕೆ ಹೆಲ್ಮೆಟ್ ಧರಿಸುವುದರಿಂದ ಆಗುವ ಉಪಯೋಗದ ಬಗ್ಗೆ ಮಾಹಿತಿ ನೀಡಿದರು.

Next Story





