ಸ್ಮಾರ್ಟ್ ಸಿಟಿ ಯೋಜನೆ ಸಾಕಾರಗೊಳ್ಳಲು 150 ಬಿಲಿಯನ್ ಡಾಲರ್ ಬೇಕು !

ಹೊಸದಿಲ್ಲಿ , ಜ 31 : ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆ ಸಾಕಾರಗೊಳ್ಳಲು ಮುಂದಿನ ಕೆಲವು ವರ್ಷಗಳಲ್ಲಿ ಕನಿಷ್ಠ 150 ಬಿಲಿಯನ್ ಡಾಲರ್ ಬಂಡವಾಳದ ಅಗತ್ಯವಿದ್ದು ಇದರಲ್ಲಿ ದೊಡ್ಡ ಪಾಲು ಖಾಸಗಿ ಕ್ಷೇತ್ರದಿಂದ ನಿರೀಕ್ಷಿಸಲಾಗಿದೆ. "ಡೆಲಾಯ್ಟ್ " ವರದಿಯ ಪ್ರಕಾರ 120 ಬಿಲಿಯನ್ ಡಾಲರ್ ಗೂ ಹೆಚ್ಚು ಬಂಡವಾಳ ಖಾಸಗಿಯವರಿಂದಲೇ ಬರಲಿದೆ.
ಕೇಂದ್ರ ಸರಕಾರ ಈಗಾಗಲೆ 500 ನಗರಗಳನ್ನು ಮೇಲ್ದರ್ಜೆಗೇರಿಸಲು ಸ್ಮಾರ್ಟ್ ಸಿಟಿ ಹಾಗು "ಅಮೃತ್" ಯೋಜನೆಗಳನ್ನು ಪ್ರಾರಂಭಿಸಿದ್ದು ಪ್ರಾರಂಭಿಕ ಅನುದಾನವಾಗಿ 7.513 ಬಿಲಿಯನ್ ಡಾಲರ್ ಘೋಷಿಸಿದೆ.
ಆದರೆ ಈ ಸ್ಮಾರ್ಟ್ ಸಿಟಿಗಳ ಅಭಿವೃದ್ಧಿಗೆ ಬಂಡವಾಳದ ವ್ಯವಸ್ಥೆಯೇ ದೊಡ್ಡ ಸವಾಲಾಗಿದೆ. ಸ್ಮಾರ್ಟ್ ಸಿಟಿ ಅಭಿವೃದ್ಧಿ ಯೋಜನೆಯ ಆಡಳಿತ , ಸರಕಾರೀ ನಿರ್ಧಾರ ಕೈಗೊಳ್ಳುವ , ನೀತಿ ನಿಯಮ ರೂಪಿಸುವ ವಿಷಯಗಳು ಇಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿವೆ ಎಂದು "ಡೆಲಾಯ್ಟ್ ಇಂಡಿಯಾದ " ಪಿ ಎನ್ ಸುದರ್ಶನ್ ಹೇಳಿದ್ದಾರೆ. ಸರಕಾರ ಇತ್ತೀಚಿಗೆ ಮೊದಲ ಹಂತದಲ್ಲಿ ಅಭಿವೃದ್ಧಿಯಾಗುವ 20 ಸ್ಮಾರ್ಟ್ ಸಿಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.





