ಮರ್ಧಾಳ: ಎಸ್ಸೆಸ್ಸೆಫ್ ವತಿಯಿಂದ ಬಂಟ್ರ ಸರಕಾರಿ ಶಾಲೆಗೆ ಟೈಲರಿಂಗ್ ಮೆಶಿನ್ ಕೊಡುಗೆ

ಕಡಬ: ಎಸ್ಸೆಸ್ಸೆಫ್ ಮರ್ಧಾಳ ಶಾಖೆ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂಟ್ರ, ಮರ್ಧಾಳಕ್ಕೆ ಟೈಲರಿಂಗ್ ಮೆಶಿನ್ ಕೊಡುಗೆಯಾಗಿ ನೀಡಲಾಯಿತು.
ಮರ್ಧಾಳ ಶಾಖಾ ಅಧ್ಯಕ್ಷ ಅಬ್ಬಾಸ್ ಮರ್ಧಾಳ ಶಾಲಾ ಅಧ್ಯಾಪಕ ರಾಮಕೃಷ್ಣ ಮಲ್ಲಾರರಿಗೆ ಮೆಶಿನ್ನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಕೆಸಿಎಫ್ ದುಬೈ ಘಟಕದ ಪ್ರಧಾನ ಕಾರ್ಯದರ್ಶಿ ಹಬೀಬ್ ರಹ್ಮಾನ್, ಎಸ್ಸೆಸ್ಸೆಫ್ ಮರ್ಧಾಳ ಶಾಖಾ ಸದಸ್ಯರಾದ ಹನೀಫ್, ನಿಝಾರ್ ಸಾಲೆತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.
Next Story





