ಟ್ವೆಂಟಿ20: ಭಾರತಕ್ಕೆ 198 ರನ್ ಗುರಿ

ಸಿಡ್ನಿ: ಭಾರತ ವಿರುದ್ಧದ ಕೊನೆಯ ಟ್ವೆಂಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾವು ನಿಗದಿತ 20 ಓವರುಗಳಲ್ಲಿ ಐದು ವಿಕಟ್ ನಷ್ಟಕ್ಕೆ 197 ರನ್‌ಗಳನ್ನು ಗಳಿಸಿ ಭಾರತಕ್ಕೆ ದೊಡ್ಡ ಸವಾಲನ್ನು ಮುಂದಿಟ್ಟಿದೆ.
14 ರನ್ಸ್ ಪಡೆದ ಉಸ್ಮಾನ್ ಖ್ವಾಜರ ವಿಕೆಟ್ ಮೊದಲು ಉರುಳಿದೆ. ವಾಟ್ಸನ್, ಶೋನ್‌ಮಾರ್ಶ್ ಜೊತೆಯಾಟದ ನಡುವೆ ಮಾರ್ಶನ್ನು ಅಶ್ವಿನ್ ಹೊರಕಳಿಸಿದರು.
ಅದರ ಬೆನ್ನಿಗೇ ಕ್ರೀಸ್‌ಗಳಿದ ಮ್ಯಾಕ್ಸ್‌ವೆಲ್‌ರನ್ನು ಯುವರಾಜ್ ಹೊರಗಟ್ಟಿದರು. ಖ್ವಾಜಾ ವಿಕೆಟ್ ಆಶಿಷ್ ನೆಹ್ರಾಗೆ ಸಿಕ್ಕಿದೆ.
ಅಡಿಲೇಡ್ ಮತ್ತು ಮೆಲ್ಬರ್ನ್‌ನಲ್ಲಿ ಗೆದ್ದ ಭಾರತ, ಸರಣಿ ತನ್ನದಾಗಿಸಿಕೊಂಡಿದೆ.
Next Story





