ಕಾಸರಗೋಡು; ಎಂಡೋ ಸಲ್ಫಾನ್ ಬಾಧಿತರ ಬಡ್ಡಿಯನ್ನು ಸಹಕಾರಿ ಬ್ಯಾಂಕುಗಳು ಕೈಬಿಡಲಿ: ಸರಕಾರ
ತಿರುವಂತಪುರಂ: ಕಾಸರಗೋಡು ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರ ಸಾಲದ ಮೇಲಿನ ಬಡ್ಡಿಯನ್ನು ಆಯಾಯ ಸರಕಾರಿ ಬ್ಯಾಂಕುಗಳು ಕೈಬಿಡಬೇಕು ಹಾಗೂ ನಷ್ಟವಾಗುವ ಬಡ್ಡಿಮೊತ್ತವನ್ನು ಅಯಾ ಬ್ಯಾಂಕುಗಳೇ ವಹಿಸಿಕೊಳ್ಳಬೇಕೆಂದು ಸೂಚಿಸಿ ಬ್ಯಾಂಕ್‌ಗಳಿಗೆ ಸರಕಾರ ಆದೇಶಿಸಿದೆ.

ಸಂತ್ರಸ್ತರ ಸಾಲದ ಮೊತ್ತವನ್ನು ಸರಕಾರ ಪಾವತಿಸಲಿದ್ದು ಬಡ್ಡಿ ಸಂಬಂಧಿತ ಬ್ಯಾಂಕುಗಳು ಕೈಬಿಡಬೇಕೆಂದು ಮುಖ್ಯಂತ್ರಿ ಇತ್ತೀಚೆ ಹೇಳಿದ್ದರು. ರಾಷ್ಟ್ರೀಕೃತ ಶೆಡ್ಯೂಲ್ಡ್ ಬ್ಯಾಂಕ್‌ಗಳು ಇದನ್ನು ಅಂಗೀಕರಿಸಿವೆ. ಆದರೆ ಬಡ್ಡಿಯನ್ನು ಕೂಡ ವಹಿಸಿಕೊಳ್ಳಲು ಸರಕಾರ ಆದಷ್ಟು ಬೇಗ ಆದೇಶ ಹೊರಡಿಸಬೇಕೆಂದು ಸಹಕಾರಿ ಬ್ಯಾಂಕುಗಳು ಆಗ್ರಹಿಸಿವೆ.
Next Story





