ಕಾರ್ಕಳ;ಅಂಬ್ಯುಲೆನ್ಸ್‌ಗೆ ಹಿಂಬದಿಯಿಂದ ಬೈಕ್ ಡಿಕ್ಕಿ, ಮೂವರಿಗೆ ಗಾಯ,
ಕಾರ್ಕಳ ಅಂಬ್ಯುಲೆನ್ಸ್‌ಗೆ ಹಿಂಬದಿಯಿಂದ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುತ್ತಿದ್ದ ಮೂವರು ಗಾಯಗೊಂಡ ಘಟನೆ ಕುಕ್ಕುಂದೂರು ಜೋಡುರಸ್ತೆ ಬಳಿ ಶುಕ್ರವಾರ ಸಂಭವಿಸಿದೆ. ಕೊಪ್ಪದಿಂದ ಸಂದೇಶ್ ಎಸ್.ಶೆಟ್ಟಿ ಅವರು ಅಂಬ್ಯುಲೆನ್ಸ್‌ನಲ್ಲಿ ಕೊಪ್ಪದಿಂದ ರೋಗಿಯೊಬ್ಬರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸುತ್ತಿದ್ದರು. ಅದೇ ಸಂದರ್ಭ ಅಂಬ್ಯುಲೆನ್ಸ್‌ಗೆ ಓವರ್‌ಟೇಕ್ ಮಾಡಿದ ದ್ವಿಚಕ್ರ ವಾಹನವು ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಅದರಲ್ಲಿ ಸವಾರಿ ಮಾಡುತ್ತಿದ್ದ ರಾಜೇಶ್, ಜಗದೀಶ್ ಮತ್ತು ಸುನೀತಾ ಗಾಯಗೊಂಡಿದ್ದಾರೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





