ಮಂಗಳೂರು; ಪ.ಜಾತಿ,ಪ.ಪಂಗಡ ಅಹವಾಲು ಸ್ವೀಕಾರ ಸಭೆಯಲ್ಲಿ ಪ್ರತಿಧ್ವನಿಸಿದ ವೇಮುಲಾ ಆತ್ಮಹತ್ಯೆ ಪ್ರಕರಣ,
ಮಂಗಳೂರು,ಜ.31:ನಗರದ ಪೊಲೀಸ್ ಕಮೀಶನರ ಕಚೇರಿಯಲ್ಲಿ ಇಂದು ನಡೆದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಹವಾಲು ಸ್ವೀಕಾರ ಸಭೆಯಲ್ಲಿ ಹೈದರಾಬಾದ್ ವಿಶ್ವ ವಿದ್ಯಾನಿಲಯದಲ್ಲಿ ಇತ್ತೀಚೆಗೆ ಆತ್ಮ ಹತ್ಯೆ ಮಾಡಿಕೊಂಡ ರೋಹಿತ್ ವೇಮು ಲಾ,ಮಡಿಕೇರಿ ಕಾಲೇಜಿನ ಪ್ರಾಂಶುಪಾಲ ಸುದೇಶ್ ಆತ್ಮಹತ್ಯೆ ಪ್ರಕರಣಗಳ ವಿಷಯ ಪ್ರಸ್ತಾಪಿಸಿದ ಸದಸ್ಯರು ಮಂಗಳೂರು ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳಲ್ಲಿಯೂ ಎಸ್‌ಸಿ/ಎಸ್‌ಟಿ ಕಾನೂನು ಜಾಗೃತಿ ಶಿಬಿರವನ್ನು ಹಮ್ಮಿಕೊಳ್ಳ ಬೇಕಾಗಿದೆ ಎಂದು ಆಗ್ರಹಿಸಿದರು.ಮಂಗಳೂರು ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಸರಕಾರಿ ಕಾಲೇಜುಗಳಲ್ಲಿ ಹಾಗೂ ಇತರ ಖಾಸಗಿ ಕಾಲೇಜುಗಳಲ್ಲಿ ಯೂ ಹೈದರಾಬಾದ್ ವಿಶ್ವ ವಿದ್ಯಾನಿಲಯದಲ್ಲಿ ಆದ ರೀತಿಯ ಜಾತಿ ತಾರತಮ್ಯದ ವ್ಯವಸ್ಥೆ ಇದೆ.ಈ ಬಗ್ಗೆ ದೂರು ನೀಡಿದರೆ ಇನ್ನಷ್ಟು ಕಿರುಕುಳ ಹೆಚ್ಚಾಗಬಹುದು.ನಮ್ಮನ್ನು ಗುರಿಯಾಗಿಸಿ ಬೇರೆ ಸಮಸ್ಯೆ ಸೃಷ್ಟಿಸುತ್ತಾರೆ ಎಂದು ತೊಂದರೆಗೊಳಗಾದವರು ದೂರು ನೀಡಲು ಬರುವುದಿಲ್ಲ.ಇದರಿಂದಾಗಿ ಸಾಕಷ್ಟು ಪ್ರಕರಣಗಳು ಮುಚ್ಚಿ ಹೋಗುತ್ತಿವೆ.
ಇತ್ತೀಚೆಗೆ ಖಾಸಗಿ ಕಾಲೇಜ್ ಒಂದರಲ್ಲಿ ಇದೆ ರೀತಿಯ ಜಾತಿ ದ್ವೇಷದಿಂದ ಓರ್ವ ಉಪನ್ಯಾಸಕಿ ಕಿರುಕುಳ ಅನುಭವಿಸಿದ್ದಾರೆ. ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ.ದಲಿತರ ಮೇಲಿನ ದೌರ್ಜನ್ಯ ತಡೆ ಕಾನೂನಿನ ಪರಿಜ್ಞಾನ ದಲಿತರಿಗೆ ಮತ್ತು ಆಡಳಿತ ಮಂಡಳಿ ಯವರಿಗೂ ಇಲ್ಲದೆ ಇರುವುದರಿಂದ ಈ ರೀತಿಯ ಘಟನೆಗಳು ಮರುಕಳಿಸಲು ಕಾರಣವಾಗುತ್ತಿದೆ ಎಂದು ಸಭೆಯಲ್ಲಿ ರಘುವೀರ್ ಸಲಹೆ ನೀಡಿದರು.ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಕಮೀಶನರ್ ತಿಳಿಸಿದರು.ಮಡಿಕೇರಿಯ ಖಾಸಗಿ ಕಾಲೇಜೊಂದರ ಪ್ರಾಂಶು ಪಾಲ ಸುದೇಶ್‌ರ ಪದೋನ್ನತಿಯನ್ನು ಸಹಿಸದ ಕಾಲೇಜಿನಲ್ಲಿ ಜಾತಿಯ ಕಾರಣದಿಂದ ನಡೆದ ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ಮೇಲೆ ಕ್ರಮ ಕೈ ಗೊಳ್ಳಬೇಕು ಎಂದು ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.ಈ ಬಗ್ಗೆ ವಿವರಣೆ ನೀಡಿದ ಪೊಲೀಸ್ ಅಧಿಕಾರಿ ಹೆಚ್ಚಿನ ತನಿಖೆಗೆಗಾಗಿ ಪ್ರಕರಣವನ್ನು ಕೊಡಗು ಜಿಲ್ಲೆಯ ಶುಂಠಿಕೊಪ್ಪ ಠಾಣೆಗೆ ವರ್ಗಾಯಿಸಲಾಗಿದೆ,ಅಲ್ಲಿನ ಪೊಲೀಸರ ಮೂಲಕ ಮುಂದಿನ ತನಿಖೆ ನಡೆಯುತ್ತದೆ ಎಂದರು.
ಸುರತ್ಕಲ್ ನಲ್ಲಿ ಇತ್ತೀಚೆಗೆ ನಿರ್ಮಿಸಲಾದ ಟೋಲ್ ಗೇಟ್‌ನಲ್ಲಿ ಶುಲ್ಕ ಸಂಗ್ರಹಿಸುತ್ತಿರುವವರು ಸಾ ರ್ವ ಜನಿಕ ರೊಂದಿಗೆ ದರ್ಪದ ವರ್ತನೆ ತೋರುತ್ತಿದ್ದಾರೆ.ಅಲ್ಲದೆ ದುಬಾರಿ ಶುಲ್ಕವನ್ನು ವಸೂಲು ಮಾಡುತ್ತಿದ್ದಾರೆ ಎಂದು ಸಭೆಯಲ್ಲಿ ಪ್ರತಿನಿಧಿಯೊಬ್ಬರು ಆರೋಪಿಸಿದರು.
ನಗರದ ನಂತೂರು ವೃತ್ತದಲ್ಲಿ ಸಿಗ್ನಲ್ ಹಾಳಾಗಿ ಮೂರು ತಿಂಗಳಾಗಿದೆ ಅದನ್ನು ದುರಸ್ತಿ ಪಡಿಸಬೇಕಾಗಿದೆ.
ನಂತೂರು ಪದವಾ ಕಾಲೇಜ್‌ಬಳಿ ರಸ್ತೆ ದಾಟಲು ಆಗುತ್ತಿರುವ ಸಮಸ್ಯೆಯ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸ್ ನಿಯೋಜನೆ ಮಾಡಬೇಕು.ಪೊಲೀಸ್ ಠಾಣೆಗಳಲ್ಲಿ ಮಹಿಳೆಯರನ್ನು ರಾತ್ರಿವೇಳೆಯವರಗೆ ಕಾಯುವಂತೆ ಮಾಡುವುದು ಸರಿಯಲ್ಲ.ಖಾಸಗಿ ಬಸ್ಸುಗಳಲ್ಲಿ ಟೇಪ್‌ರೆಕಾರ್ಡರ್ ಕಿರಿಕಿರಿಯಿಂದ ತಪ್ಪಿಸಬೇಕು.ಪೊಲೀಸ್ ಠಾಣೆಗಳಲ್ಲಿ ಸಿ.ಸಿ.ಕೆಮರಾ ಅಳವಡಿಕೆ ಮಾಡಬೇಕು.
ಮಂಗಳೂರು ಸರ್ವಿಸ್ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಸೂಕ್ತ ಟಾಯಿಲೆಟ್ ಸೌಕರ್ಯ ಇಲ್ಲದೆ ದುರ್ನಾತ ಬೀರುತ್ತಿರುವ ದೃಶ್ಯ ಸಾಮನ್ಯವಾಗಿದೆ. ಅಲ್ಲಿನ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಬೇಕು.ತಣ್ಣೀರು ಬಾವಿ ಪರಿಸರದಲ್ಲಿ ಗಾಂಜಾ ಸೇವಿಸುವ ಯುವಕರಿಂದ ನಡೆಯುತ್ತಿರುವ ಅನುಚಿತ ವರ್ತನೆಯನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈ ಗೊಳ್ಳಬೇಕು ಎಂದು ಆಗ್ರಹಿಸಿದರು.ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಎರಡೂವರೆ ವರ್ಷದಿಂದ ಬಾವಿಗೆ ವಿಷಪೂರಿತ ತ್ಯಾಜ್ಯ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆದ ಬಗ್ಗೆ ವಿವರ ದೊರೆತಿಲ್ಲ ಎಂದು ಸುಮಿತ್ರ ಉಮೇಶ್ ದಂಪತಿಗಳು ಸಭೆಯಲ್ಲಿ ಈ ಬಗ್ಗೆ ತನಿಖೆಯ ವಿವರ ನೀಡಬೇಕು ಎಂದು ಆಗ್ರಹಿಸಿದರು. ಬೆಳ್ಮ ಗ್ರಾಮ ಪಂಚಾಯತ್ ನಲ್ಲಿ ದಲಿತರಿಗೆ ಮೂಲಭೂತ ಸೌಕರ್ಯಗಳನ್ನು ನೀಡದೆ ಸಾಮಾಜಿಕ ದೌರ್ಜನ್ಯ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು ಎಂದು ಸಭೆಯಲ್ಲಿ ಭಾಗವಹಿಸಿದ ಸದಸ್ಯರು ಆಯುಕ್ತರ ಗಮನಸೆಳೆದರು.ಈ ಬಗ್ಗೆ ಪ್ರತಿಕ್ರೀಯಿಸಿದ ಆಯುಕ್ತರು ಸಭೆಯಲ್ಲಿ ಗಮನಕ್ಕೆ ತಂದಿರುವ ಸಮಸ್ಯೆಗಳ ಬಗ್ಗೆ ತುರ್ತು ಕ್ರಮ ಕೈ ಗೊಳ್ಳುವ ಭರವಸೆ ನೀಡಿದರು.ಡಿಸಿ.ಪಿ ,ಡಾ.ಸಂಜೀವ ಪಾಟೀಲ್,ಶಾಂತರಾಜು ಮೊದಲಾದವರು ಉಪಸ್ಥಿತರಿದ್ದರು.







