ಮೈಸೂರು ಬಂಡವಾಳ ಹೂಡಿಕೆಗೆ ಸೂಕ್ತ ಸ್ಥಳ
ಬೆಂಗಳೂರು.ಜ.31: ಮೈಸೂರು ಬಂಡವಾಳ ಹೂಡಿಕೆಗೆ ಸೂಕ್ತ ಸ್ಥಳ ಎಂದು ಮೈಸೂರು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ತಿಳಿಸಿದ್ದಾರೆ. ಈ ಬಾರಿ ಬೆಂಗಳೂರಿನಲ್ಲಿ ನಡೆಯುವ ವಿಶ್ವ ಬಂಡವಾಳ ಹೂಡಿಕೆ ಸಮಾವೇಶದಲ್ಲಿ, ಈ ಬಗ್ಗೆ ಗಮನ ಸೆಳೆಂಲಾಗುವುದು . ಸೂಕ್ತ ಹವಾಮಾನ ಪರಿಸ್ಥಿತಿ, ಮೂಲಸೌಕರ್ಯ, ಸಂಪರ್ಕ ವ್ಯವಸ್ಥೆ, ನೀರು ಲಭ್ಯತೆ ಮುಂತಾದವುಗಳಿಂ ಇಲ್ಲಿ ಬಂಡವಾಳ ಹೂಡಿಕೆಗೆ ಪೂರಕವಾತಾವರಣವಿದೆ ಎನ್ನುವುದನ್ನು ಮನದಟ್ಟು ಮಾಡಿಕೊಡಲಾಗವುದು ಎಂದರು.
ಹಣಕಾಸು ಸಂಸ್ಥೆಗಳು, ವಿದ್ಯಾಸಂಸ್ಥೆಗಳು, ನಗರದಲ್ಲಿದ್ದು ಉತ್ತಮವಾಗಿ ಅಭಿವೃದ್ಧಿಗೊಂಡ ಸೇವಾ ವಲಯ ಇದೆ. ಉದ್ಯಮಿಗಳಿಗೆ ನೀಡಲು ಸಿದ್ಧಗೊಂಡಿರುವ ಭೂಮಿ ಸಹ ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು, ಬಂಡವಾಳ ಹೂಡಿಕೆದಾರರನ್ನು ಇದು ಆಕರ್ಷಿಸಲಿದೆ. ಮೈಸೂರು-ನಂಜನಗೂಡು ವಲಯಕ್ಕೆ ಸೇರಿದ, ತಾಂಡ್ಯ, ಅಡಕನಹಳ್ಳಿ, ಇಮ್ಮಾವು, ಗ್ರಾಮಗಳಲ್ಲಿ 2312 ಎಕರೆ ಪ್ರದೇಶದಲ್ಲಿ ಹರಡಿಕೊಂಡ ಕೈಗಾರಿಕಾ ಪ್ರದೇಶ ಪ್ರಾರಂಭವಾಗಿದೆ. ಈ ಪ್ರದೇಶದಲ್ಲಿ ಬೆಂಗಳೂರಿಗೆ ಹೋಲಿಸಿದಲ್ಲಿ ಕಡಿಮೆ ಬೆಲೆಯಲ್ಲಿ ಭೂಮಿ ಲಭ್ಯವಿದೆ ಎಂದರು.





