Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅಂಗವಿಕಲ ಪ್ರಯಾಣಿಕೆಗೆ ಗಾಲಿ ಕುರ್ಚಿ...

ಅಂಗವಿಕಲ ಪ್ರಯಾಣಿಕೆಗೆ ಗಾಲಿ ಕುರ್ಚಿ ನೀಡದ ಏರ್‌ಇಂಡಿಯಾ - ತೆವಳಿಕೊಂಡೇ ಮೆಟ್ಟಲನ್ನಿಳಿದ ದಿಲ್ಲಿ ವಿವಿಯ ಪ್ರೊಫೆಸರ್

ವಾರ್ತಾಭಾರತಿವಾರ್ತಾಭಾರತಿ31 Jan 2016 10:03 PM IST
share
ಅಂಗವಿಕಲ ಪ್ರಯಾಣಿಕೆಗೆ ಗಾಲಿ ಕುರ್ಚಿ ನೀಡದ ಏರ್‌ಇಂಡಿಯಾ - ತೆವಳಿಕೊಂಡೇ ಮೆಟ್ಟಲನ್ನಿಳಿದ ದಿಲ್ಲಿ ವಿವಿಯ ಪ್ರೊಫೆಸರ್

ಹೊಸದಿಲ್ಲಿ,ಜ.31: ಭಿನ್ನಸಾಮರ್ಥ್ಯದ ಮಹಿಳಾ ಪ್ರಯಾಣಿಕೆಯೊಬ್ಬರಿಗೆ ತಾನು ಗಾಲಿಕುರ್ಚಿಯನ್ನು ಒದಗಿಸಲಿಲ್ಲವೆಂಬ ಆರೋಪವನ್ನು,ಸಾರ್ವಜನಿಕರಂಗದ ವಾಯುಯಾನ ಸಂಸ್ಥೆ ಏರ್‌ಇಂಡಿಯಾ ರವಿವಾರ ನಿರಾಕರಿಸಿದೆ. ಏರ್‌ಇಂಡಿಯಾ ವಿಮಾನದಿಂದ ಇಳಿಯಲು ಗಾಲಿಕುರ್ಚಿ ದೊರೆಯದ ಕಾರಣ ತಾನು ತೆವಳಿಕೊಂಡು, ಪ್ರಯಾಣಿಕ ಕೋಚ್ ಅನ್ನು ಹತ್ತಬೇಕಾಯಿತೆಂದು ಮಹಿಳಾ ಪ್ರಯಾಣಿಕೆ ಆಪಾದಿಸಿದ್ದರು.

  ಘಟನೆಯ ಬಗ್ಗೆ ಏರ್‌ಇಂಡಿಯಾ ರವಿವಾರ ಹೇಳಿಕೆಯೊಂದನ್ನು ನೀಡಿ, ‘‘ ಪ್ರಯಾಣಿಕೆಗೆ ಆಗಿರುವ ಅನಾನುಕೂಲಕ್ಕೆ ನಾವು ತೀವ್ರವಾಗಿ ವಿಷಾದಿಸುತ್ತೇವೆ. ಆದಾಗ್ಯೂ, ಮಾಧ್ಯಮಗಳಲ್ಲಿ ಈ ಕುರಿತು ಪ್ರಕಟವಾದ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ’’ ಎಂದು ಹೇಳಿದೆ.

‘‘ ದಿಲ್ಲಿ ವಿಮಾನನಿಲ್ದಾಣದಲ್ಲಿ ವಿಮಾನವು ಇಳಿದಾಗ, ಪ್ರಯಾಣಿಕೆಗಾಗಿ ಗಾಲಿಕುರ್ಚಿಯನ್ನು ತರಲು ಸ್ವಲ್ಪ ಸಮಯ ಹಿಡಿಯಿತು. ಪ್ರಯಾಣಿಕರು ವಿಮಾನದಿಂದ ಇಳಿಯತೊಡಗಿದ್ದರಿಂದ, ನಮ್ಮ ಪೂರಕ ಸಿಬ್ಬಂದಿಯು, ಈ ಪ್ರಯಾಣಿಕೆಗೆ ವಿಮಾನದಿಂದ ಕೆಳಗಿಳಿಯಲು ನೆರವಾದರು. ಗಾಲಿಕುರ್ಚಿಯನ್ನು ವಿಮಾನದ ಬಾಗಿಲ ಮೆಟ್ಟಲಲ್ಲಿ ಒದಗಿಸಲಾಗಿತ್ತು ಎಂದು ಏರ್‌ಲೈನ್ ಹೇಳಿಕೆಯಲ್ಲಿ ತಿಳಿಸಿದೆ.

   ದಿಲ್ಲಿ ವಿವಿಯ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಅನಿತಾಘಾಯ್, ಶುಕ್ರವಾರ ಅಲಿಯಾನ್ಸ್ ಏರ್ (ಏರ್‌ಇಂಡಿಯಾದ ಪ್ರಾದೇಶಿಕ ವಿಭಾಗ) ಮೂಲಕ ಡೆಹ್ರಾಡೂನ್‌ನಿಂದ ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿದಿದ್ದರು. ಭಿನ್ನಸಾಮರ್ಥ್ಯದವರಾದ ಆಕೆ, ತನಗೆ ಗಾಲಿಕುರ್ಚಿಯನ್ನು ಒದಗಿಸುವಂತೆ ಕೋರಿದ್ದರು.

  ‘‘ನನ್ನ ನಾಲ್ವರು ಸಹದ್ಯೋಗಿಗಳೊಂದಿಗೆ ನಾನು ವಿಮಾನವನ್ನೇರಿದ್ದೆ. ಆದರೆ ವಿಮಾನ ದಿಲ್ಲಿ ತಲುಪಿದ ಬಳಿಕ ತನಗೆ ಗಾಲಿಕುರ್ಚಿಯನ್ನು ಒದಗಿಸುವಂತೆ ಪದೇ ಪದೇ ವಿನಂತಿಸಿದ ಹೊರತಾಗಿಯೂ, ಗಗನಪರಿಚಾರಿಕೆಯು ಅದಕ್ಕೆ ಕಿವಿಗೊಡಲಿಲ್ಲ. ವಿಮಾನವು ಸಂಜೆ 7:30ರ ಹೊತ್ತಿಗೆ ದಿಲ್ಲಿ ತಲುಪಿತ್ತು. ನಾನು ಸಹದ್ಯೋಗಿಗಳೊಂದಿಗೆ ತಾಳ್ಮೆಯಿಂದ ಗಾಲಿಕುರ್ಚಿಗಾಗಿ ಕಾಯುತ್ತಾ ಕುಳಿತಿದ್ದೆ. 8:15 ಗಂಟೆಯಾದಾಗ, ಗಾಲಿಕುರ್ಚಿ ದೊರೆಯುವ ಸಾಧ್ಯತೆಯಿಲ್ಲವೆಂದು ನಮಗೆ ಮನದಟ್ಟಾಯಿತು. ಫ್ಲೈಟ್‌ಕೋಚ್ ಕಮಾಂಡರ್ ಪದೇ ಪದೇ ಮನವಿ ಮಾಡಿಕೊಂಡ ಬಳಿಕ ಪ್ಯಾಸೆಂಜರ್ ಕೋಚ್ ಒಂದನ್ನು ಕಳುಹಿಸಿಕೊಡಲಾಯಿತು. ಭದ್ರತಾಕಾರಣಗಳನ್ನು ನೀಡಿ, ನಾನು ತೆವಳಿಕೊಂಡೇ ಕೋಚ್‌ಏರಬೇಕಾಯಿತು ಎಂದು ಅನಿತಾಘಾಯ್ ಆರೋಪಿಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X