ಕೊಲಂಬಿಯ: 2,100 ಗರ್ಭಿಣಿಯರಿಗೆ ಝಿಕಾ ವೈರಸ್ ಸೋಂಕು
ಬೊಗೋಟ (ಕೊಲಂಬಿಯ), ಜ. 31: ವಿಕೃತ ತಲೆಗಳ ಶಿಶುಗಳ ಜನನಕ್ಕೆ ಕಾರಣವಾಗುವ ಝಿಕಾ ವೈರಸ್ ಅಮೆರಿಕ ಖಂಡಗಳಲ್ಲಿ ವೇಗವಾಗಿ ಹರಡುತ್ತಿದ್ದು, ಕೊಲಂಬಿಯದ 2,100 ಗರ್ಭಿಣಿಯರು ಈ ಸೊಳ್ಳೆಯ ಸೋಂಕಿಗೆ ಒಳಗಾಗಿದ್ದಾರೆ ಎಂದು ದೇಶದ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಶನಿವಾರ ಹೇಳಿದೆ.
ಈ ವೈರಸ್ ಭ್ರೂಣದ ಮೆದುಳು ಸರಿಯಾಗಿ ಅಭಿವೃದ್ಧಿಯಾಗದಂತೆ ತಡೆಯುತ್ತದೆ ಎಂದು ಹೇಳಲಾಗಿದೆ. ಕೊಲಂಬಿಯದಲ್ಲಿ ಈಗಾಗಲೇ 20,297 ಝಿಕಾ ಸೋಂಕು ಪ್ರಕರಣಗಳು ಖಚಿತಪಟ್ಟಿವೆ ಹಾಗೂ ಆ ಪೈಕಿ 2,116 ಗರ್ಭಿಣಿಯರಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಕೊಲಂಬಿಯದಲ್ಲಿ ಈವರೆಗೆ ವಿಕೃತ ತಲೆಗಳ ಮಕ್ಕಳು ಜನಿಸಿಲ್ಲ ಹಾಗೂ ಈ ಸೋಂಕಿನಿಂದ ಸಾವೂ ಸಂಭವಿಸಿಲ್ಲ.
ಸೋಂಕಿಗೊಳಗಾದ ಗರ್ಭಿಣಿಯರ ಪೈಕಿ ಶೇ. 37.2% ವೆನೆಝುವೆಲದ ಪೂರ್ವದ ಗಡಿಗೆ ಹೊಂದಿಕೊಂಡಿರುವ ನಾರ್ಟೆ ಡಿ ಸ್ಯಾಂಟಂಡರ್ ರಾಜ್ಯದವರಾಗಿದ್ದಾರೆ.
Next Story





