‘ಬಿಗ್‌ಬಾಸ್’ ಗೆದ್ದ ನಟಿ ಶ್ರುತಿ

ಬೆಂಗಳೂರು, ಜ.31: ಕೊನೆಗೂ ಬಿಗ್‌ಬಾಸ್ ವಿನ್ನರ್ ಆಗಿ ನಟಿ ಶ್ರುತಿ ಹೊರ ಹೊಮ್ಮಿದ್ದಾರೆ. ಶ್ರುತಿ ಅಂತಿಮ ಹಣಾಹಣಿಯಲ್ಲಿ ಗೆಲುವಿನ ನಗೆ ಬೀರಿದರೆ, ಇನ್ನು ರನ್ನರ್ ಅಪ್ ಆಗಿ ಚಂದನ್ ಆಯ್ಕೆಯಾದರು. ಬಿಗ್‌ಬಾಸ್ ಫೈನಲ್‌ಗೆ ಶ್ರುತಿ, ರಹ್ಮಾನ್, ಆನಂದ್, ಚಂದನ್, ಪೂಜಾ ಆಯ್ಕೆಯಾಗಿದ್ದರು. ಎಲ್ಲ ಟಾಸ್ಕ್‌ನಲ್ಲಿ ಉತ್ತಮವಾಗಿ ಆಡಿದ ಆನಂದ್ ಅಥವಾ ರಹ್ಮಾನ್ ಮನೆಯ ಬಾಸ್ ಆಗುತ್ತಾರೆ ಎಂದು ಬಹುತೇಕರ ನಿರೀಕ್ಷೆಯಾಗಿತ್ತು. ಆದರೆ, ವೀಕ್ಷಕರ ಮತದಾನ ಅಂತಿಮವಾಗಿದ್ದು, ಕಣ್ಣೀರಿನ ಶ್ರುತಿಯನ್ನು ಜನ ಕೈ ಹಿಡಿದಿದ್ದಾರೆ.
ಮೂರನೆ ಸರಣಿಯ ಬಿಗ್‌ಬಾಸ್ ಕಿರೀಟ ಮುಡಿಗೇರಿಸಿಕೊಳ್ಳುವ ಮೂಲಕ ನಟಿ ಶ್ರುತಿ ಬಿಗ್‌ಬಾಸ್ ಎನಿಸಿಕೊಂಡ ಮೊದಲ ಮಹಿಳೆ ಎನಿಸಿದ್ದಾರೆ.
Next Story





