ಒಕಿನಾವ ದ್ವೀಪದಲ್ಲಿ ಜಪಾನ್‌ನ ಯುದ್ಧ ವಿಮಾನಗಳು ದುಪ್ಪಟ್ಟು
ಟೋಕಿಯೊ, ಜ. 31: ಪೂರ್ವ ಚೀನಾ ಸಮುದ್ರ ದಲ್ಲಿರುವ ವಿವಾದಿತ ದ್ವೀಪಗಳ ಸಮೀಪವಿರುವ ತನ್ನ ದಕ್ಷಿಣದ ದ್ವೀಪ ಒಕಿನಾವದಲ್ಲಿ ನಿಯೋಜಿಸಲಾಗಿರುವ ಎಫ್-15 ಯುದ್ಧ ವಿಮಾನಗಳ ಸಂಖ್ಯೆಯನ್ನು ಜಪಾನ್ ದ್ವಿಗುಣಗೊಳಿಸಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಒಕಿನಾವದ ನಾಹ ನೆಲೆಯಲ್ಲಿ ಈಗ ಜಪಾನ್‌ನ ವಾಯು ಸ್ವರಕ್ಷಣಾ ಪಡೆ 40 ಎಫ್-15 ವಿಮಾನಗಳನ್ನು ಹೊಂದಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಪೂರ್ವ ಚೀನಾ ಸಮುದ್ರದಲ್ಲಿರುವ ಜಪಾನ್ ನಿಯಂತ್ರಣದ ಸೆಂಕಾಕು ದ್ವೀಪಗಳ ಒಡೆತನದ ಬಗ್ಗೆ ಜಪಾನ್ ಮತ್ತು ಚೀನಾಗಳ ನಡುವೆ ಆಗಾಗ್ಗೆ ಘರ್ಷಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಪಾನ್ ಈ ಕ್ರಮ ತೆಗೆದುಕೊಂಡಿದೆ ಎನ್ನಲಾಗಿದೆ. ಜನವಾಸವಿರದ ಈ ದ್ವೀಪಗಳನ್ನು ಜಪಾನ್ ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದೆ. ಆದರೆ, ಈ ದ್ವೀಪಗಳ ಮೇಲೆ ಚೀನಾ ಕೂಡ ಹಕ್ಕು ಸ್ಥಾಪಿಸಿದ್ದು, ಅವುಗಳನ್ನು ಡಯವೋಯಸ್ ದ್ವೀಪಗಳು ಎಂಬುದಾಗಿ ಕರೆಯುತ್ತಿದೆ.
Next Story





