Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಆಂತರಿಕ ಹಿಂಸೋತ್ಪಾದಕರ ಹಾವಳಿ

ಆಂತರಿಕ ಹಿಂಸೋತ್ಪಾದಕರ ಹಾವಳಿ

ಸನತ್‌ಕುಮಾರ ಬೆಳಗಲಿಸನತ್‌ಕುಮಾರ ಬೆಳಗಲಿ31 Jan 2016 11:59 PM IST
share
ಆಂತರಿಕ ಹಿಂಸೋತ್ಪಾದಕರ ಹಾವಳಿ



ಮಹಾತ್ಮ ಗಾಂಧೀಜಿ ನೇತೃತ್ವದ ಅಹಿಂಸಾತ್ಮಕ ಚಳವಳಿಯಿಂದ ದೇಶಕ್ಕೆ ಸ್ವಾತಂತ್ರ ಬಂತು ಎಂಬುದು ಸುಳ್ಳು ಎಂದು ಸಂಘಪರಿವಾರದ ಪ್ರಚಾರಕ ಲೇಖಕ ಎಸ್.ಎಲ್. ಭೈರಪ್ಪ ಹೇಳಿದ್ದಾರೆ. ತಾನೇನು ಕಡಿಮೆ ಎಂಬಂತೆ ಲೇಖಕ ಚಿದಾನಂದಮೂರ್ತಿ ಹಿಂದೂ ರಾಷ್ಟ್ರದ ಸ್ಥಾಪನೆಗೆ ಹಿಂಸೆಗೂ ಸಿದ್ಧರಾಗಬೇಕೆಂದು ಯುವಕರಿಗೆ ಕರೆ ನೀಡಿದ್ದಾರೆ. ಇವರಿಬ್ಬರ ಹೇಳಿಕೆಗಳನ್ನು ಇವರ ಬೆಂಬಲಿಗರು ಈಗಾಗಲೇ ಮೂವರು ಚಿಂತಕರನ್ನು ಕೊಲ್ಲುವ ಮೂಲಕ ಜಾರಿಗೆ ತಂದಿದ್ದಾರೆ. ಬರಲಿರುವ ದಿನಗಳು ಇನ್ನೂ ಆತಂಕಕಾರಿಯಾಗಿವೆ.

ಅಸಹನೆ ಮತ್ತು ಹಿಂಸೆ ಎಂಬೆರಡು ಸಿದ್ಧಾಂತಗಳನ್ನು ಆರೆಸ್ಸೆಸ್ ಅಡಾಲ್ಫ್ ಹಿಟ್ಲರ್‌ನಿಂದ ಪಡೆದು ಎಂಟು ದಶಕಗಳೇ ಗತಿಸಿದವು. ಈ ಎಂಬತ್ತು ವರ್ಷಗಳಲ್ಲಿ ನಾಝಿಗಳಿಂದ ಪಡೆದ ಈ ಎರವಲು ಸಿದ್ಧಾಂತದಿಂದ ದೇಶ ಸಾಕಷ್ಟು ಯಾತನೆ ಪಟ್ಟಿದೆ. ಇದು ಬರೀ ಹಿಟ್ಲರ್, ಮುಸಲೋನಿಗಳಿಂದ ಪಡೆದ ಎರವಲು ಸಿದ್ಧಾಂತ ಮಾತ್ರವಲ್ಲ. ಇದರೊಂದಿಗೆ ಮನುವಾದವನ್ನು ಮಿಶ್ರಣ ಮಾಡಿ ಹಿಂದುತ್ವದ ಲೇಬಲ್ ಅಂಟಿಸಿ ದೇಶಕ್ಕೆ ವಿಷಪ್ರಾಶನ ಮಾಡಿಸುವ ಕುಕೃತ್ಯ ಅವ್ಯಾಹತವಾಗಿ ನಡೆದಿದೆ. ದೇಶವನ್ನು ಕೊಲ್ಲಲು ಸಂಘಪರಿವಾರ ನಾನಾ ಅಂಗ ಸಂಘಟನೆಗಳನ್ನು ಕಟ್ಟಿಕೊಂಡಿದೆ.

ಆರೆಸ್ಸೆಸ್ ಕಟ್ಟಿದ ಅಂಗ ಸಂಘಟನೆಗಳಲ್ಲಿ ಎಬಿವಿಪಿಯೂ ಒಂದು. ಈ ಸಂಘಟನೆ ಈಗ ರೋಹಿತ್ ವೇಮುಲಾ ಆತ್ಮಹತ್ಯೆಯ ಕಳಂಕವನ್ನು ಅಂಟಿಸಿಕೊಂಡು ನಿಂತಿದೆ. ಇಡೀ ದೇಶದ ಶಿಕ್ಷಣ ಕ್ಷೇತ್ರದಲ್ಲಿ ಇದು ಭಯಾನಕ ವಾತಾವರಣವನ್ನು ನಿರ್ಮಾಣ ಮಾಡಿದೆ. ಸದಾ ನೈತಿಕತೆ ಚಾರಿತ್ರ ನಿರ್ಮಾಣದ ಬಗ್ಗೆ ಮಾತಾಡುವ ಈ ಸಂಘಟನೆ ನವಭಾರತವನ್ನು ಕಟ್ಟಬೇಕಾದ ವಿದ್ಯಾರ್ಥಿಗಳನ್ನು ಜಾತಿ-ಮತದ ಹೆಸರಿನಲ್ಲಿ ವಿಭಜಿಸಿ ದ್ವೇಷದ ದಳ್ಳುರಿ ಎಬ್ಬಿಸುತ್ತಿದೆ. ಈ ಬಗ್ಗೆ ‘ಔಟ್‌ಲುಕ್’ ಪತ್ರಿಕೆ ವಿವರವಾಗಿ ಬೆಳಕು ಚೆಲ್ಲಿದೆ. ಆದರೆ ಅದಕ್ಕಿಂತ ಘೋರ ಇತಿಹಾಸ ಇದರದು.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ದೇಶದ ವಿಶ್ವ ವಿದ್ಯಾನಿಲಯದ ಕ್ಯಾಂಪಸ್‌ಗಳಲ್ಲಿ, ಕಾಲೇಜು ಆವರಣಗಳಲ್ಲಿ ಸಂಘಪರಿವಾರದ ಈ ಅಂಗ ಸಂಘಟನೆಯ ಗೂಂಡಾಗಿರಿ ತೀವ್ರಗೊಂಡಿದೆ. ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುತ್ವ ಅಂದರೆ ಬ್ರಾಹ್ಮಣತ್ವ ವಿಚಾರ ಸರಣಿಯನ್ನು ಒಪ್ಪಿಕೊಳ್ಳದ ಯಾರೂ ಸುರಕ್ಷಿತವಾಗಿ ಇರಲು ಸಾಧ್ಯವಿಲ್ಲದಂತಾಗಿದೆ. ಡಾ.ಅಂಬೇಡ್ಕರ್, ಜ್ಯೋತಿಬಾಫುಲೆ, ಪೆರಿಯಾರ್ ವಿಚಾರಗಳ ಬಗ್ಗೆ ಮಾತಾಡಿದರೆ ಈ ಗೂಂಡಾಗಳು ಹಲ್ಲೆ ಮಾಡುತ್ತಾರೆ.

ಗ್ಯಾಟ್ ಒಪ್ಪಂದಕ್ಕೆ ಭಾರತ ಸಹಿ ಹಾಕಿದ ನಂತರ ನಮ್ಮ ದೇಶದ ಶೈಕ್ಷಣಿಕ ಕ್ಷೇತ್ರ ತಲ್ಲಣಗೊಂಡಿದೆ. ಜ್ಞಾನಧಾರೆಯಾದ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುವ ಪ್ರಕ್ರಿಯೆ ಅತ್ಯಂತ ಜೋರಾಗಿ ನಡೆದಿದೆ. ಶಿಕ್ಷಣದ ಈ ವ್ಯಾಪಾರದ ವಿರುದ್ಧ, ಸುಲಿಗೆಯ ವಿರುದ್ಧ ಒಂದಾಗಿ ಹೋರಾಟ ಮಾಡಬೇಕಾದ ವಿದ್ಯಾರ್ಥಿ ಸಮುದಾಯವನ್ನು ಜಾತಿ-ಧರ್ಮದ ಹೆಸರಿನಲ್ಲಿ ವಿಭಜಿಸಿ ಶಿಕ್ಷಣದ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಲು ಈ ಕೋಮುವಾದಿ ವಿದ್ಯಾರ್ಥಿ ಸಂಘಟನೆ ಯತ್ನಿಸುತ್ತಿದೆ.

ರೋಹಿತ್ ಸಾವಿನ ನಂತರ ಈ ಅಪಾಯಕಾರಿ ವಿದ್ಯಾರ್ಥಿ ಸಂಘಟನೆಯ ಪಾತಕಗಳು ಒಂದೊಂದಾಗಿ ಬಯಲಿಗೆ ಬರತೊಡಗಿವೆ. ಕೆಲ ವರ್ಷಗಳ ಹಿಂದೆ ಉಜ್ಜಯಿನಿಯಲ್ಲಿ ಸಬರ್‌ವಾಲ ಎಂಬ ಪ್ರಾಧ್ಯಾಪಕರ ಹತ್ಯೆಯ ಕಳಂಕ ಹಚ್ಚಿಕೊಂಡವು. ಈ ಫ್ಯಾಶಿಸ್ಟ್ ಸಂಘಟನೆ ವಿಶ್ವವಿದ್ಯಾನಿಲಯಗಳಲ್ಲಿ ತನ್ನ ನಿರ್ದೇಶನದಂತೆ ಚಟುವಟಿಕೆಗಳು ನಡೆಯಬೇಕೆಂದು ಪಟ್ಟು ಹಿಡಿದು ಹಿಂಸೆಯ ವಾತಾವರಣವನ್ನು ಸೃಷ್ಟಿಸುತ್ತಿದೆ. ಈ ಹಿಂಸೆಗೆ ರೋಸಿಯೇ ರೋಹಿತ್ ಆತ್ಮಹತ್ಯೆ ಮಾಡಿಕೊಂಡರು.

ಕೋಮುವಾದವನ್ನು ವಿರೋಧಿಸುವವರನ್ನೆಲ್ಲ ರಾಷ್ಟ್ರ ವಿರೋಧಿಗಳೆಂಬಂತೆ ಸಂಘಪರಿವಾರ ಬಿಂಬಿಸುತ್ತಿದೆ. ಇತ್ತೀಚೆಗೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಅತಿಥಿ ಉಪನ್ಯಾಸಕರಾಗಿದ್ದ ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತ ಸಂದೀಪ್ ಪಾಂಡೆ ಅವರನ್ನು ಉಚ್ಚಾಟಿಸಲಾಯಿತು. ಗಾಂಧಿವಾದಿಯಾದ ಈ ಸಂದೀಪ್ ಪಾಂಡೆ ನಕ್ಸಲೀಯ ಎಂದು ಬ್ರಾಂಡ್ ಮಾಡಿ ಎಬಿವಿಪಿ ಒತ್ತಡ ತಂದು ಈ ನೀಚ ಕೃತ್ಯ ನಡೆಸಿತು.

ಅಲಹಾಬಾದ್‌ನಲ್ಲಿ ಪ್ರಜಾಪ್ರಭುತ್ವ, ಮಾಧ್ಯಮ ಹಾಗೂ ಅಭಿವ್ಯಕ್ತಿ ಸ್ವಾತಂತ್ರದ ಕುರಿತ ವಿಚಾರಗೋಷ್ಠಿಯಲ್ಲಿ ಎಬಿವಿಪಿ ಇದೇ ರೀತಿ ದಾಂಧಲೆ ಮಾಡಿ ನಡೆಯದಂತೆ ಮಾಡಿತು. ತನ್ನ ವಿಚಾರವನ್ನು ಒಪ್ಪಿಕೊಳ್ಳದಿದ್ದವರನ್ನೆಲ್ಲ ರಾಷ್ಟ್ರವಿರೋಧಿ ಎಂದು ಕರೆದು ಅನೇಕ ಕಾಲೇಜುಗಳಲ್ಲಿ ಉಪನ್ಯಾಸಗಳನ್ನು, ವಿಚಾರಗೋಷ್ಠಿಗಳನ್ನು, ಚಲನಚಿತ್ರ ಪ್ರದರ್ಶನಗಳನ್ನು ನಡೆಯದಂತೆ ಎಬಿವಿಪಿ ದಾಂಧಲೆ ಮಾಡುತ್ತಿದೆ.

ಎಬಿವಿಪಿ ಇತ್ತೀಚೆಗೆ ಎಸಗಿದ ಅತ್ಯಂತ ಹೀನಾಯವಾದ ಕೃತ್ಯವೆಂದರೆ ಅಲಹಾಬಾದ್‌ನಲ್ಲಿ ವಿಚಾರಗೋಷ್ಠಿಯನ್ನು ಹಾಳು ಮಾಡಿದ್ದು. ‘ಹಿಂದೂ’ ಪತ್ರಿಕೆಯ ಹಿಂದಿನ ಸಂಪಾದಕ ಹಾಗೂ ಈ ದೇಶದ ಹಿರಿಯ ಪತ್ರಕರ್ತ ಸಿದ್ಧಾರ್ಥ ವರದರಾಜನ್ ಈ ವಿಚಾರಗೋಷ್ಠಿಯಲ್ಲಿ ಮಾತಾಡಲು ಬಂದಿದ್ದರು. ಆಗ ಹಿಂಸೆಯ ಬೆದರಿಕೆಯೊಡ್ಡಿದ ಎಬಿವಿಪಿ ಪುಂಡರು ಸಿದ್ಧಾರ್ಥ ವರದರಾಜನ್‌ರನ್ನು ನಕ್ಸಲೀಯ ಎಂದು ಕರೆದು ವಿವಿ ಕ್ಯಾಂಪಸ್‌ನಲ್ಲಿ ಇವರ ಸಭೆಗೆ ಅವಕಾಶ ನೀಡಿದರೆ ಹಿಂಸಾಚಾರಕ್ಕೆ ಇಳಿಯುವುದಾಗಿ ಬೆದರಿಕೆ ಹಾಕಿತು.

ಇದು ಬೆದರಿಕೆ ಮಾತ್ರ ಆಗಿರಲಿಲ್ಲ. ಸಿದ್ಧಾರ್ಥ ವರದರಾಜನ್ ಉಪನ್ಯಾಸ ನಡೆಯದಂತೆ ಮಾಡಿತು. ಕೊನೆಗೆ ಹೊರಗೆ ಬೇರೆಲ್ಲೋ ಭಾಷಣ ಮಾಡಿದ ವರದರಾಜನ್ ವಿವಿ ಕುಲಪತಿಗಳನ್ನು ಕಾಣಲು ಕ್ಯಾಂಪಸ್ ಒಳಗೆ ಪ್ರವೇಶಿಸಿದರೆ ಅವರನ್ನು ೇರಾವ್ ಮಾಡಿ ಒತ್ತೆಯಳಾಗಿ ಇರಿಸಿಕೊಂಡಿತು. ಕೊನೆಗೆ ಪೊಲೀಸರು ಧಾವಿಸಿಬಂದು ವರದರಾಜನ್‌ರನ್ನು ಬಂಧಮುಕ್ತಗೊಳಿಸಿದರು.
 
ಈ ವಿವಿ ಕ್ಯಾಂಪಸ್‌ನಲ್ಲಿ ಸಿದ್ಧಾರ್ಥ ವರದರಾಜನ್ ಭಾಷಣ ಮಾಡಬೇಕಿದ್ದ ಸಂದರ್ಭದಲ್ಲೇ ಎಬಿವಿಪಿ ಶಂತನು ಮಹಾರಾಜ ಎಂಬ ಧರ್ಮಗುರುವೊಬ್ಬನನ್ನು ಆಹ್ವಾನಿಸಿ ಆತನ ಭಾಷಣ ಏರ್ಪಡಿಸಿದ ಸಂಘಪರಿವಾರ ಈ ಮಠಾಧೀಶನ ಭಾಷಣ ನಿರಾತಂಕವಾಗಿ ನಡೆಯಿತು. ಸದಾ ಸಂಸ್ಕೃತಿ, ಸಭ್ಯತೆ ಬಗ್ಗೆ ಬೊಬ್ಬೆಹಾಕುವವರ ಸಂಸ್ಕೃತಿ ಇದು.

ವಿಶ್ವ ವಿದ್ಯಾನಿಲಯಗಳ ಆಡಳಿತ ವರ್ಗಗಳಿಂದ ಶಿಕ್ಷಣದ ವ್ಯಾಪಾರಿಗಳಿಂದ, ಆಳುವ ಸರಕಾರಗಳಿಂದ, ಸಕಲ ನೆರವನ್ನು ಪಡೆಯುವ ಎಬಿವಿಪಿ ಸಮಾಜ ಬದಲಾವಣೆಗೆ ಹೋರಾಡುವವರ ಮೇಲೆ ನಿರಂತರವಾಗಿ ಹಲ್ಲೆ ಮಾಡುತ್ತ ಬಂದಿದೆ. ದಾಭೋಳ್ಕರ್, ಪನ್ಸಾರೆ, ಕಲಬುರ್ಗಿ ಅವರು ಬದುಕಿದಾಗ ಅವರಿಗೆ ಇದು ನಾನಾ ಚಿತ್ರಹಿಂಸೆ ನೀಡಿತು. ಮುಂಬೈ ಕಾಲೇಜೊಂದರಲ್ಲಿ ಕಬೀರ್ ಕಲಾ ಮಂಚ್‌ನ ಗಾಯಕಿ ಶೀತಲ್ ಪಾಠೆ ಅವರ ಸಭೆಯಲ್ಲಿ ಎಬಿವಿಪಿ ಗಲಾಟೆ ಮಾಡಿತು.

ಭಾರೀ ಬಂಡವಾಳಗಾರರಿಂದ, ಕಾರ್ಪೊರೇಟ್ ಕಂಪೆನಿಗಳಿಂದ ಹಾಗೂ ರಿಯಲ್ ಎಸ್ಟೇಟ್ ಮಾಫಿಯಾದಿಂದ ಹಣಕಾಸಿನ ನೆರವನ್ನು ಪಡೆಯುವ ಎಬಿವಿಪಿ ಈಗ ಎಷ್ಟು ಪ್ರಭಾವಶಾಲಿಯಾಗಿದೆ ಅಂದರೆ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿ ಮೇಲೆ ಬಂಡಾಯ ದತ್ತಾತ್ರೇಯ ಮೂಲಕ ಒತ್ತಡ ತಂದು ರೋಹಿತ್ ವೇಮುಲಾರನ್ನು ಹೈದರಾಬಾದ್ ವಿವಿಯಿಂದ ಹೊರಗೆ ಹಾಕಿಸಿತು. ಸಂದೀಪ್ ಪಾಂಡೆ ಅವರನ್ನು ವಜಾ ಮಾಡಿಸಿತು.

ಮುಝಫ್ಫರ್‌ನಗರ ಕೋಮುಗಲಭೆ ಬಗ್ಗೆ ಸಾಕ್ಷಚಿತ್ರ ಪ್ರದರ್ಶನಕ್ಕೆ ಹೈದರಾ ಬಾದ್ ಮತ್ತು ದಿಲ್ಲಿಯಲ್ಲಿ ಎಬಿವಿಪಿ ಅಡ್ಡಿಪಡಿಸಿತು. ಲಕ್ನೊದಲ್ಲಿ ಲವ್ ಜಿಹಾದ್ ಬಗ್ಗೆ ಏರ್ಪಡಿಸಿದ ವಿಚಾರಗೋಷ್ಠಿಯೊಂದನ್ನು ಕೆಡಿಸಿತು. ಪಾಟ್ನಾದಲ್ಲಿ ದಿಲ್ಲಿ ವಿ.ವಿ. ಪ್ರಾಧ್ಯಾಪಕ ಜಿ.ಎನ್. ಸಾಯಿಬಾಬಾ ಬಂಧನದ ಬಗ್ಗೆ ಏರ್ಪ ಡಿಸಿದ್ದ ಚರ್ಚೆಯೊಂದನ್ನು ಎಬಿವಿಪಿ ಗೂಂಡಾಗಳು ಹಾಳು ಮಾಡಿದರು.

ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಮಾತ್ರವಲ್ಲ, ದಲಿತ ಬಹುಜನ ವಿದ್ಯಾರ್ಥಿ ಸಂಘಟನೆಗಳ ಮೇಲೆ ಎಬಿವಿಪಿ ಎಂಬ ಫ್ಯಾಶಿಸ್ಟ್ ಪುರೋಹಿತಶಾಹಿ ಸಂಘಟನೆ ದಾಳಿ ಆರಂಭಿಸಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಅವರು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಮೋದಿ ಸರಕಾರ ಪುಂಡಾಟಿಕೆಗೆ ರಕ್ಷಾಕವಚವಾಗಿ ನಿಂತಿದೆ.

ಖಾಸಗಿ ಕಾಲೇಜುಗಳ ಶುಲ್ಕ ಏರಿಕೆ ಬಗ್ಗೆ ಎಬಿವಿಪಿ ಎಂದೂ ಪ್ರತಿಭಟಿಸುವುದಿಲ್ಲ. ಈ ಕಾಲೇಜುಗಳ ಹಾಸ್ಟೆಲ್‌ಗಳ ಅವ್ಯವಸ್ಥೆ, ಅಧ್ವಾನಗೊಂಡ ಪ್ರಯೋಗಾಲಯಗಳು, ಅಸ್ತವ್ಯಸ್ತಗೊಂಡ ಗ್ರಂಥಾಲಯಗಳ ಬಗ್ಗೆ ಅದು ಮಾತಾಡುವುದಿಲ್ಲ. ಅದರ ಚಳವಳಿ ಏನಿದ್ದರೂ ಸರಕಾರಿ ಕಾಲೇಜುಗಳ ವಿರುದ್ಧ. ಎಬಿವಿಪಿ ಈ ದೇಶದ ಅತ್ಯಂತ ಅಪಾಯಕಾರಿ ಸಂಘಟನೆ ಯಾಕೆಂದರೆ ಇದು ವಿದ್ಯಾರ್ಥಿಗಳನ್ನು ವಿಭಜಿಸಿ ಹೊಡೆದಾಟಕ್ಕಿಳಿಸುತ್ತಿದೆ. ಶಿಕ್ಷಣದ ವ್ಯಾಪಾರೀಕರಣವನ್ನು ಬೆಂಬಲಿಸುತ್ತದೆ. ಬಾಹ್ಯ ಭಯೋತ್ಪಾದನೆ ಮಾತ್ರವಲ್ಲ, ಇಂಥ ಆಂತರಿಕ ಹಿಂಸೋತ್ಪಾದಕ ಸಂಘಟನೆಗಳ ಬಗ್ಗೆ ದೇಶ ಜಾಗೃತರಾಗಿರಬೇಕಾಗಿದೆ.

share
ಸನತ್‌ಕುಮಾರ ಬೆಳಗಲಿ
ಸನತ್‌ಕುಮಾರ ಬೆಳಗಲಿ
Next Story
X