Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. * ಭಾರತ ಹಾಗೂ ಫ್ರಾನ್ಸ್ ಒಂದೇ ರೀತಿಯ...

* ಭಾರತ ಹಾಗೂ ಫ್ರಾನ್ಸ್ ಒಂದೇ ರೀತಿಯ ಸಮಸ್ಯೆ ಎದುರಿಸುತ್ತಿದೆ.

ವಾರ್ತಾಭಾರತಿವಾರ್ತಾಭಾರತಿ1 Feb 2016 12:25 AM IST
share
* ಭಾರತ ಹಾಗೂ ಫ್ರಾನ್ಸ್ ಒಂದೇ ರೀತಿಯ ಸಮಸ್ಯೆ ಎದುರಿಸುತ್ತಿದೆ.

- ಫ್ರಾಂಕೊಯಿಸ್ ಹೊಲ್ಲಾಂಡ್, ಫ್ರಾನ್ಸ್ ಅಧ್ಯಕ್ಷ

-ಆ ಸಮಸ್ಯೆಯ ಹೆಸರು ನರೇಂದ್ರ ಮೋದಿ ಅಲ್ಲ ತಾನೇ?

..........................................................................

* ಕನ್ನಡದಲ್ಲಿ ಸಂಶೋಧನೆ ನಡೆಸಲು ಸಂಸ್ಕೃತ ಮೂಲದ ಪ್ರಾಚೀನ ಕಾವ್ಯಗಳ ಓದು ಅನಿವಾರ್ಯ.

- ಡಾ.ಎಸ್.ಎಲ್. ಭೈರಪ್ಪ, ಹಿರಿಯ ಸಾಹಿತಿ

- ಮೊದಲು ಕರ್ನಾಟಕದಲ್ಲಿ ಕನ್ನಡ ಓದುವುದು ಅನಿವಾರ್ಯಗೊಳಿಸೋಣ.

...............................................................

* ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ದುಡ್ಡಿನ ಮದ ಬಂದಿದೆ.

- ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

-ನಿಮ್ಮ ಮದ ಇಳಿದಿದೆಯೇ?

.........................................................................

* ಖುಜರಾಹೋದಲ್ಲಿರುವ ಬೆತ್ತಲೆ ಶಿಲ್ಪಗಳಿಗೂ ಮೋದಿ ಸರಕಾರದ ಸಂಸ್ಕೃತಿ ಸಚಿವರು ಸೀರೆ ಉಡಿಸುವ ದಿನ ದೂರವಿಲ್ಲ..

- ನಯನತಾರಾ ಸೆಹಗಲ್, ಸಾಹಿತಿ

-ಭೈರಪ್ಪ ಅವರು ಆ ಶಿಲ್ಪಗಳಿಗೆ ಸಂಸ್ಕೃತ ಕಲಿಸುವುದಕ್ಕೆ ಮುಂದಾಗಿದ್ದಾರಂತೆ.

...........................................................................

* ನನಗೆ ಯಾವುದೇ ಸ್ಥಾನಮಾನ ನೀಡದಿದ್ದರೂ ಬಿಜೆಪಿಯನ್ನು ಬಲಪಡಿಸಲು ಸಂಕಲ್ಪ ಮಾಡಿದ್ದೇನೆ.

- ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

-ಸ್ಥಾನವೇನೋ ಕೊಡಬಹುದು. ಆದರೆ ಮಾನವನ್ನು ಅದು ಕೊಡುವುದೆಲ್ಲಿಂದ?

......................................................................

* ಗೋಮಾಂಸ ಬೇಕಿದ್ದರೆ ನನಗೆ ಮತ ಹಾಕಿ.

- ಅಸಾದುದ್ದೀನ್ ಉವೈಸಿ, ಸಂಸದ

-ಕಸಾಯಿ ಖಾನೆಯಲ್ಲೇ ಮತಗಟ್ಟೆ ಮಾಡಬೇಕಾದೀತೇನೋ?

.........................................................................

* ಭಾರತ ಮತ್ತು ಫ್ರಾನ್ಸ್ ಕೈಜೋಡಿಸಿದರೆ ವಿಶ್ವಕ್ಕೆ ಭದ್ರತೆ ಒದಗಿಸಬಹುದು.

-ನರೇಂದ್ರ ಮೋದಿ, ಪ್ರಧಾನಿ

-ನಿಮ್ಮಿಬ್ಬರಿಂದ ವಿಶ್ವಕ್ಕೆ ಭದ್ರತೆಯನ್ನು ಕೊಡುವವರಾರು?

................................................................................

* ಗುಂಡಿನ ಮಳೆಯ ಕೆಳಗೆ ಶಾಂತಿ ಅಸಾಧ್ಯ.
- ಪ್ರಣವ್ ಮುಖರ್ಜಿ, ರಾಷ್ಟ್ರಪತಿ

-ಯಾವುದಾದರೂ ಆಗಬಹುದು, ಮಳೆ ಸುರಿದರೆ ಸಾಕು ಎನ್ನುವುದು ರೈತರ ಬೇಡಿಕೆ. ............................................................................

* ನಮ್ಮ ಪಕ್ಷ 18ರ ಸಂಖ್ಯೆ ಬಂದಾಗಲೆಲ್ಲ ಅಧಿಕಾರ ಪಡೆದುಕೊಂಡಿದೆ. 2018ರಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ.

- ಎಚ್.ಡಿ. ರೇವಣ್ಣ, ಮಾಜಿ ಸಚಿವ

-ಮತದಾರರು 18ನ್ನು 19 ಎಂದು ಕರೆಯಲು ನಿರ್ಧರಿಸಿದ್ದಾರಂತೆ.

....................................................................................

* ಸಚಿನ್ ತೆಂಡುಲ್ಕರ್‌ರಂತಹ ತಾರೆಯರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡುವುದು ವ್ಯರ್ಥ.

-ಶತ್ರುಘ್ನ ಸಿನ್ಹಾ, ಸಂಸದ

-ತಾವೂ ಸಿನೆಮಾ ತಾರೆಯೇ ಅಲ್ಲವೇ?

...........................................................................................

* ಕರ್ನಾಟಕ ಉಗ್ರರ ಸುರಕ್ಷಿತ ತಾಣವಾಗುತ್ತಿದೆ.

- ಪ್ರಹ್ಲಾದ್ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ

- ನಿಮ್ಮವರು ಬಹಿರಂಗವಾಗಿ ಮಾಡುತ್ತಿರುವ ಕೃತ್ಯಗಳನ್ನು ನೋಡುವಾಗ ಅದು ನಿಜ ಅನ್ನಿಸುತ್ತದೆ.

.......................................................................................

* ನನ್ನ ಸಾವಿನ ಸುದ್ದಿ ಸುಳ್ಳು.

- ಶರದ್‌ಪವಾರ್, ಎನ್‌ಸಿಪಿ ನಾಯಕ

-ಸುಳ್ಳು ಎನ್ನುವುದನ್ನು ಸಾಕ್ಷಿ ಸಮೇತ ಸಾಬೀತುಗೊಳಿಸಿ.

........................................................................................

* ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರವೇ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ.

- ಎಲ್.ಕೆ. ಅಡ್ವಾಣಿ, ಬಿಜೆಪಿ ಮುಖಂಡ

-ಹೌದು. ಆಗಾಗ ನಿಮಗೆ ಮಾತನಾಡುವುದಕ್ಕೆ ಅವಕಾಶ ಸಿಗುತ್ತಿರುವುದೇ ಅದಕ್ಕೆ ಉತ್ತಮ ಉದಾಹರಣೆ.

.................................................................................................

* ಇಂದು ಪ್ರಕೃತಿಯಲ್ಲಿರುವ ಕ್ರಿಮಿಕೀಟಗಳು, ಮರಗಿಡ ಜೀವ ವೈವಿಧ್ಯಗಳೆಲ್ಲವುಗಳ ಮೇಲೂ ದಾಳಿಯಾಗುತ್ತಿವೆ.

- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

-ದಾಳಿಗಳು ಈಗ ಸಂಸ್ಕೃತಿ ರಕ್ಷಣೆ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗುತ್ತಿವೆ.

...............................................................................

* ಭಾರತ ಮಾಡುತ್ತಿರುವ ಸಾಧನೆ ಕುರಿತು ಯಾರೂ ಮಾತನಾಡುತ್ತಿಲ್ಲ.

- ಡೊನಾಲ್ಡ್ ಟ್ರಂಪ್, ಅಮೆರಿಕ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ

-ಬೆಳೆಯುತ್ತಿರುವ ಅಸಹಿಷ್ಣುತೆಯನ್ನು ಉಲ್ಲೇಖಿಸಿ ಈ ಮಾತೇ?

.....................................................................................

* ಆಕಾಶದಲ್ಲೇನಿದೆ. ಪಾತಾಳದಲ್ಲೇನಿದೆ ಎನ್ನುವುದೆಲ್ಲವೂ ದೇವೇಗೌಡರಿಗೆ ಗೊತ್ತಿದೆ.

- ಜಾಫರ್ ಶರೀಫ್, ಕಾಂಗ್ರೆಸ್ ನಾಯಕ

-ಶರೀಫರ ತಲೆಯೊಳಗೆ ಏನಿದೆ ಎನ್ನುವುದನ್ನೊಂದು ಬಿಟ್ಟು.

......................................................................

*ಎಲ್ಲಿಯವರೆಗೆ ಸಾಮಾಜಿಕ ತಾರತಮ್ಯ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿಯೂ ಇರಬೇಕು.

- ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

-ಹೇಳಿ. ಎಲ್ಲಿಯವರೆಗೆ ತಾರತಮ್ಯ ಇರಬೇಕು ಎಂದು ಬಯಸುತ್ತೀರಿ?

........................................................................................

* ಸರಕಾರಿ ಬಸ್‌ಗಳು ಡಕೋಟಾ ಆಗಿದೆ.

- ಕೆ.ಎಸ್. ಈಶ್ವರಪ್ಪ, ಪರಿಷತ್ ಪ್ರ.ಪ.ನಾಯಕ

-ನಿಮ್ಮ ಪಕ್ಷಕ್ಕಿಂತ ವಾಸಿ.

...........................................................................

* ಕಾಂಗ್ರೆಸ್‌ನ ಒಳಗೇ ನಮಗೆ ಎದುರಾಳಿಗಳಿದ್ದಾರೆ.

- ಡಾ.ಜಿ.ಪರಮೇಶ್ವರ್, ಗೃಹಸಚಿವ

-ಇದು ಗೊತ್ತಿರುವ ಸಂಗತಿಯೇ ಅಲ್ಲವೇ?

.............................................................................................

* ಈಗಿನ ರಾಜಕೀಯ ನಮ್ಮಂತಹವರಿಗಲ್ಲ.

- ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

-ದೇವೇಗೌಡರಂಥವರಿಗೇ ವಾಸಿ ಎನ್ನುತ್ತೀರಾ?

share
ವಾರ್ತಾಭಾರತಿ
ವಾರ್ತಾಭಾರತಿ
Next Story
X