ನುಸ್ರತುಲ್ ಮಸಾಕೀನ್ ಅಸೋಸಿಯೇಷನ್ ಕುಂದಾಪುರ: ರಿಯಾದ್ ಘಟಕದ ಅಧ್ಯಕ್ಷರಾಗಿ ಅಸ್ಲಂ ಕೋಯ

ನುಸ್ರತುಲ್ ಮಸಾಕೀನ್ ಅಸೋಸಿಯೇಷನ್ ಕುಂದಾಪುರ ತಾಲ್ಲೂಕಿನ ರಿಯಾದ್ ಘಟಕದ ವಾರ್ಷಿಕ ಮಹಾಸಭೆಯು NMA ಕೇಂದ್ರ ಸಮಿತಿ ಅಧ್ಯಕ್ಷರಾದ ಮಹಮ್ಮದ್ ತಾಹೀರ್ ಹಸನ್ ರವರ ಅಧ್ಯಕ್ಷತೆಯಲ್ಲಿ ರಿಯಾದ್ ನ ಅಲ್ ಮದೀನ ಹೈಪರ್ ಮಾರ್ಕೆಟ್ ಸಭಾಂಗಣ ದಲ್ಲಿ ಮಾಸ್ಟರ್ ರಯಾನ್ ರವರ ಕಿರಾತ್ ಹಾಗೂ ಅಸ್ಲಂ ಕೋಯರವರ ದುಃಆ ದೊಂದಿಗೆ ಆರಂಭಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಭಾಷಣ ಮಾಡಿದ NMA ಕುಂದಾಪುರ ತಾಲ್ಲೂಕಿನ ಕೇಂದ್ರ ಸಮಿತಿ ಅಧ್ಯಕ್ಷರಾದ ಮಹಮ್ಮದ್ ತಾಹೀರ್ ಹಸನ್ NMA ಕುಂದಾಪುರ ತಾಲ್ಲೂಕಿನ ಸಂಘಟನೆಯ ಬಗ್ಗೆ ನೆರೆದಂತಹ ಜನರಿಗೆ ಕಿರು ಪರಿಚಯ ನೀಡಿದರು.
NMA ಕುಂದಾಪುರ ತಾಲ್ಲೂಕಿನ ರಿಯಾದ್ ಘಟಕದ ಕಾರ್ಯದರ್ಶಿಯಾದ ಅನ್ವರ್ ಅಲಿ ಕೋಟೇಶ್ವರವರು 2015 ರ ಲೆಕ್ಕ ಪತ್ರ ಮಂಡಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾಕ್ಟರ್ ಮಹಮ್ಮದ್ ತಾಹಿರ್ ಉಲ್ಲಾ ಸಿದ್ದೀಕಿ (ENT Surgeon King Abdul Aziz Hospital) ಹಾಗೂ ಆಹ್ಮದ್ ಮೂಸ ಅಲ್ ಶಿರಾನಿ(H.R Manager Omega Factory Riyadh) NMA ಕುಂದಾಪುರ ತಾಲ್ಲೂಕಿನ ದಮ್ಮಾಮ್ ಘಟಕದ ಅಧ್ಯಕ್ಷರಾದ ಅಬುಬಕ್ಕರ್ ಕೋಡಿ ಹಾಗೂ NMA ಕುಂದಾಪುರ ತಾಲ್ಲೂಕಿನ ರಿಯಾದ್ ಘಟಕದ ಅಧ್ಯಕ್ಷರಾದ ಕೋಡಿ ಮುಲ್ಲಾ ಮೈದೀನ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
NMA ಕುಂದಾಪುರ ತಾಲ್ಲೂಕಿನ ರಿಯಾದ್ ಘಟಕದ ಗೌರವ ಅಧ್ಯಕ್ಷರಾದ ಅಬ್ದುಲ್ಲಾ ವಳಚ್ಚಿಲ್ ನೂತನ ಕಮೀಟಿ ರಚನೆಗೆ ಚಾಲನೆ ನೇತೃತ್ವ ನೀಡಿದರು. ನೂತನ ಅಧ್ಯಕ್ಷರಾಗಿ ಅಸ್ಲಂ ಕೋಯ ಹಾಗೂ ಉಪಾಧ್ಯಕ್ಷರಾಗಿ ಆದಮ್ ಸಾಸ್ತಾನ , ಕಾರ್ಯದರ್ಶಿಯಾಗಿ ಅನ್ವರ್ ಅಲಿ ಕೋಟೇಶ್ವರ ಹಾಗೂ ಜೊತೆ ಕಾರ್ಯದರ್ಶಿಯಾಗಿ K.S ರಹೀಮ್ ಹಾಗೂ ಖಜಾಂಚಿಯಾಗಿ ಸುಲೈಮಾನ್ ಕೋಡಿ, ಸಲಹೆಗಾರರಾಗಿ ಅಬ್ದುಲ್ ಹಮೀದ್ ಕೋಟೇಶ್ವರ ಹಾಗೂ ಮಾಧ್ಯಮ ವಕ್ತಾರರಾಗಿ ಯಾಕೂಬ್ ಫೈರೋಝ್ ಆಯ್ಕೆ ಮಾಡಲಾಯಿತು. ಹಾಗೂ ಕಾರ್ಯ ನಿರ್ವಾಹಕ ಸಮಿತಿಯ ಸದಸ್ಯರಾಗಿ ಶಂಶುದ್ದೀನ್ ಸಾಗರ, ಹಸೈನಾರ್ ಕೋಡಿ, ತಾಹಿರ್, ಉಸ್ಮಾನ್ ಕೋಡಿ, ಮುನಾಫ್ ಗುಲ್ವಾಡಿ, ತೌಸೀಫ್ G ಹುಸೈನ್ , ಕೋಡಿ ಮುಲ್ಲಾ ಮೈದೀನ್, ಇಬ್ರಾಹಿಂ ಗುಲ್ವಾಡಿ, ಮಹಮ್ಮದ್ ತಾಹಿರ್, ಇಂತಿಯಾಝ್ ಕುಂದಾಪುರ, ಯಾಸೀನ್ ಅಬ್ಬಾಸ್, ಅಹ್ಮದ್ ಕೋಡಿ, ಉಸ್ಮಾನ್ ಗುಲ್ವಾಡಿ , ಲತೀಫ್ ಉಚ್ಚಿಲ, ಹಾಗೂ ಆರೀಫ್ ಕೋಡಿಯವರನ್ನು ಆಯ್ಕೆ ಮಾಡಲಾಯಿತು.



ಅಬ್ದುಲ್ ಹಮೀದ್ ಕೋಟೇಶ್ವರವರು ಕಾರ್ಯಕ್ರಮವನ್ನು ನಿರೂಪಿಸಿ ಮುಲ್ಲಾ ಮೈದೀನ್ ಸ್ವಾಗತಿಸಿ , ತೌಫಿಕ್ G ಹುಸೈನ್ ವಂದಿಸಿದರು.







