ಕಾಸರಗೋಡು : ಅರೇಬಿಕ್ ವಿಶ್ವವಿದ್ಯಾನಿಲಯ ಶೀಘ್ರ ಅಸ್ತಿತ್ವಕ್ಕೆ, ಮಾಜಿ ಸಚಿವ ಚೆರ್ಕಳ೦ ಅಬ್ದುಲ್ಲ

ಕಾಸರಗೋಡು : ಅರೇಬಿಕ್ ವಿಶ್ವವಿದ್ಯಾನಿಲಯ ಶೀಘ್ರ ಅಸ್ತಿತ್ವಕ್ಕೆ ಬರಲಿದೆ ಎಂದು ಮಾಜಿ ಸಚಿವ ಚೆರ್ಕಳ೦ ಅಬ್ದುಲ್ಲ ಹೇಳಿದರು.
ಅವರು ಕಾಸರಗೋಡು ಹೊಸ ಬಸ್ಸು ನಿಲ್ದಾಣ ಬಳಿಯ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ದಂದು ಕೇರಳ ಅರೇಬಿಕ್ ಶಿಕ್ಷಕರ ಸಂಘಟನೆಯ ೬೪ ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ವರ್ಷದೊಳಗೆ ವಿಶ್ವ ವಿದ್ಯಾನಿಲಯ ಆರಂಭಗೊಳ್ಳಲಿದೆ . ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
ಸಂಘಟನೆಯ ರಾಜ್ಯ ಅಧ್ಯಕ್ಷ ಕಣ್ಣೂರು ಅಬ್ದುಲ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಎನ್. ಎ ಅಬ್ದುಲ್ ಖಾದರ್ ಮಾಸ್ಟರ್, ಎಂ . ಇಮಾಮುದ್ದಿನ್ , ಕಾನ್ಚಂಗಾಡ್ ಶಾಸಕ ಇ. ಚಂದ್ರಶೇಖರನ್, ಹಾಜಿ ಎ. ಎಂ . ಕಡವತ್, ಅಬ್ಬಾಸ್ ಬೀಗಂ, ಖಾಲಿದ್ , ಕೆ. ಎಂ ಸೈನುದ್ದೀನ್ ಹಾಜಿ , ಪಿ. ಕಮ್ಮುಕುಟ್ಟಿ ಮಾಸ್ಟರ್, ಪಿ. ಹಂಜ ಮದನಿ , ಎ . ಎ ವಹಾಬ್ , ಅಬ್ದುಲ್ ರಹಮಾನ್ , ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್, ಸಿ. ಎ. ಅಬ್ದುಲ್ ಕುನ್ಚಿ ಚಾಲ ಮೊದಲಾದವರು ಉಪಸ್ಥಿತರಿದ್ದರು.
ಕಾಸರಗೋಡು ಶಾಸಕ ಎನ್ .ಎ ನೆಲ್ಲಿಕುನ್ನು ಧ್ವಜಾರೋಹಣ ನೆರವೇರಿಸಿದರು.
ಎನ್. ಎ ಅಬ್ದುಲ್ ಖಾದರ್ ಮಾಸ್ಟರ್ ಸ್ವಾಗತಿಸಿದರು.
ರಾಜ್ಯ ಕೋಶಾಧಿಕಾರಿ ಎ . ಎ ವಹಾಬ್ ವಂದಿಸಿದರು.ವಿವಿಧ ವಿಚಾರಗೋಷ್ಠಿಗಳು ನಡೆಯುತ್ತಿದ್ದು , ನಾಳೆ ಸಮ್ಮೇಳನ ಕೊನೆಗೊಳ್ಳಲಿದೆ.







