ಆದಾಯತೆರಿಗೆ ವಂಚಕರು ಭಾರತದಲ್ಲಿ ಹೆಚ್ಚು

ಹೊಸದಿಲ್ಲಿ: ಆದಾಯ ತೆರಿಗೆ ಪಾವತಿಸುವುದರಿಂದ ಶ್ರೀಮಂತರು ತಪ್ಪಿಸಿಕೊಳ್ಳುತ್ತಿರುವುದು ಅರ್ಥ ವ್ಯವಸ್ಥೆಯಲ್ಲಿ ಏನೆಲ್ಲ ಸಂಕಟ ತಂದೊಡ್ಡಬಹುದು? ಇದಕ್ಕೆ ಅತ್ಯಂತ ದೊಡ್ಡ ಸಮಕಾಲೀನ ಉದಾಹರಣೆ ಗ್ರೀಸ್‌ನಲ್ಲಿ ಆಗಿರುವ ಆರ್ಥಿಕ ಬಿಕ್ಕಟ್ಟು ಆಗಿದೆ. ಆದಾಯ ತೆರಿಗೆಯನ್ನು ಭರಿಸಲು ಜನರು ತೋರಿಸುತ್ತಿರುವ ನಿರಾಸಕ್ತಿ ಇಟಲಿಯಲ್ಲಿ ಮತ್ತು ಕೆಲವು ಸಾಲಬಾಧಿತ ಆರ್ಥಿಕ ವ್ಯಸ್ಥೆಗಳಿರುವಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ. ಭಾರತದಲ್ಲಿಯೂ ಆದಾಯ ತೆರಿಗೆ ತಪ್ಪಿಸಿಕೊಳ್ಳುವವರ ಸಂಖ್ಯೆ ಹೆಚ್ಚಿವೆ ಎಂದು ಅತ್ಯಂತ ಹೊಸ ಲೆಕ್ಕವೊಂದು ಬಹಿರಂಗಗೊಳಿಸಿದೆ. ಇಂತಹವರನ್ನು ಆದಾಯ ತೆರಿಗೆ ಬಲೆಗೆ ಸಿಕ್ಕಿಸಿಹಾಕಲಿಕ್ಕಾಗಿ ಸರಕಾರ ಹಲವಾರು ಕ್ರಮಗಳನ್ನು ಆವಿಷ್ಕರಿಸಿ ಜಾರಿಗೆ ತರುವುದು. ಪ್ರತಿಯೊಬ್ಬರ ಬ್ಯಾಂಕ್ ಅಕೌಂಟು ನಿರೀಕ್ಷಿಸಿ ವಿದೇಶಪ್ರಯಾಣ ನೋಡಿ 12ಲಕ್ಷ ಮಂದಿಯನ್ನು ಸರಕಾರ ಆದಾಯ ತೆರಿಗೆ ವ್ಯಾಪ್ತಿಗೆ ತಂದಿದೆ. ಇಷ್ಟೆಲ್ಲ ಮಾಡಿಯೂ ಆದಾಯ ತೆರಿಗೆ ಸಂದಾಯ ಮಾಡುವವರ ಸಂಖ್ಯೆ ಕೇವಲ ಶೇ. 3ರಷ್ಟು ಮಾತ್ರವೆಂದರೆ ಅತಿಶಯವಾಗುವುದಿಲ್ಲವೇ?
ಕೇಂದ್ರ ಹಣಕಾಸು ಸಚಿವರು ಡಿಸೆಂಬರ್‌ನಲ್ಲಿ ನಡೆಸಿದ ಹೇಳಿಕೆ ಪ್ರಕಾರ ಭಾರತದಲ್ಲಿ ಶೇ. 2.89 ಮಂದಿ ಮಾತ್ರ ಆದಾಯ ತೆರಿಗೆ ಭರಿಸುತ್ತಾರೆ. ಅಂದರೆ ಕೇವಲ 36 ಮಿಲಿಯನ್ ಮಂದಿ ಮಾತ್ರ ಆದಾಯ ತೆರಿಗೆ ಸಂದಾಯಮಾಡಿದರೆ ಅಮೆರಿಕದಲ್ಲಿ ಶೇ. 45ರಷ್ಟು ಮಂದಿ ಆದಾಯ ತೆರಿಗೆ ಪಾವತಿಸುತ್ತಾರೆ. ಭಾರತದ ದೊಡ್ಡ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳುವುದಾದರೆ ಅಮೆರಿಕದಲ್ಲಿ ಎಷ್ಟೋ ಹೆಚ್ಚು ಮಂದಿ ಆದಾಯ ತೆರಿಗೆ ಭರಿಸುತ್ತಿದ್ದಾರೆ.
ಭಾರತದಲ್ಲಿ ಆದಾಯ ತೆರಿಗೆ ಪಾವತಿ ಕಡಿಮೆಯಾಗಲು ಕಾರಣಗಳಿವೆ. ಆದಾಯ ತೆರಿಗೆ ಪಾವತಿಸಲು ಅರ್ಹ ವಾರ್ಷಿಕ ವರಮಾನ ಹೊಂದಿರುವವರ ಭಾರತೀಯರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಜೊತೆಗೆ ಭಾರತದ ಗ್ರಾಮೀಣ ಪ್ರದೇಶಗಳ ಅರ್ಥ ವ್ಯವಸ್ಥೆಗಳು ಮತ್ತು ಅಂಡರ್‌ಗೌಂಡ್ ಎಕಾನಮಿಗಳ ವರಮಾನ ಸರಿಯಾಗಿ ಲೆಕ್ಕಹಾಕಿ ಆದಾಯ ತೆರಿಗೆ ನಿಶ್ಚಯಿಸಲು ಮತ್ತು ಅವನ್ನುಸಂಗ್ರಹಿಸುವುದು ಕಷ್ಟಕರವಾಗಿದೆ. ಭಾರತದ ಆದಾಯ ವ್ಯವಸ್ಥೆ ಅಪಹಾಸ್ಯಕರ ರೀತಿಯಲ್ಲಿ ಸಂಕೀರ್ಣವಾಗಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ಹೇಳುತ್ತಾರೆ. ಮಾತ್ರವಲ್ಲ ತೆರಿಗೆ ವ್ಯವಸ್ಥೆ ಭ್ರಷ್ಟಾಚಾರದಿಂದ ತುಂಬಿಕೊಂಡಿದೆ. ಆದರೆ ಇವೆಲ್ಲ ಬಗೆಹರಿಸಿ ಆದಾಯ ತೆರಿಗೆ ನಿರಾಯಾಸವಾಗಿ ಸಂಗ್ರಹಿಸಲು ಹೊಸ ಯೋಜನೆಯನ್ನು 2012-13ರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಈ ಪ್ರಕಾರ 2ಲಕ್ಷ ಮತ್ತು 5ಲಕ್ಷದ ನಡುವೆ ವಾರ್ಷಿಕ ವರಮಾನ ಇರುವವರು ಶೇ.10ಆದಾಯ ತೆರಿಗೆ ಭರಿಸಬೇಕಾಗಿದೆ.
ಕ್ರೆಡಿಟ್ ನ್ಯೂಸ್ ಗ್ಲೋಬಲ್ ವೆಲ್ತ್ ವರದಿ ಪ್ರಕಾರ ಭಾರತದಲ್ಲಿ 1500 ಆಲ್ಟ್ರೋ ವರ್ತ್ ಶ್ರೀಮಂತರಿದ್ದಾರೆ. ಇವರಲ್ಲಿ ಹೆಚ್ಚಿನವರು 50ಮಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ. 700 ಮಂದಿಗೆ 10ಮಿಲಿಯನ್ ಡಾಲರ್ ಆಸ್ತಿಯಿದೆ. ಆದರೆ ಯುರೋಪ್ ಹಾಗೂ ಇತರ ದೇಶಗಳ ಶ್ರೀಮಂತರಿಗೆೆ ಹೋಲಿಸಿದರೆ ಆದಾಯ ತೆರಿಗೆ ವಿಭಾಗದಲ್ಲಿ ಇವರಿಂದ ದೇಶಕ್ಕಾದ ಲಾಭ ಬಹಳ ಕಡಿಮೆಆಗಿದೆ. ಭಾರತದಲ್ಲಿ 125.000 ಮಿಲಿಯನಾಧೀಶರಿದ್ದಾರೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಆದರೆ ದೇಶದಲ್ಲಿ ಶೆ. 95ರಷ್ಟು ಮಂದಿಗೆ 10,000 ಡಾಲರ್‌ಗಿಂತ ಕಡಿಮೆ ಆಸ್ತಿ ಇರುವುದು. ದೇಶ ಭಾರೀ ಆರ್ಥಿಕ ಅಸಮತೋಲನವನ್ನು ಅನುಭವಿಸುತ್ತಿದೆ ಎಂದು ಈ ಮೂಲಕ ತಿಳಿಯುತ್ತದೆ. ಹೆಚ್ಚು ಮಂದಿಯನ್ನು ಆದಾಯ ತೆರಿಗೆಯ ಸಮೀಪ ತರಲಿಕ್ಕಾಗಿ ಕೇಂದ್ರ ಸರಕಾರ ಈ ವರ್ಷದ ಬಜೆಟ್‌ನಲ್ಲಿ ಹೊಸ ಕಾನೂನು ತರಲಿದೆ.







