ಗೋಹತ್ಯೆ ಮಾಡಿದ ಮುಸ್ಲಿಮ್ ಮಾಜಿ ಬಿಜೆಪಿ ನಾಯಕನ ಕುಟುಂಬಕ್ಕೆ ಬಹಿಷ್ಕಾರ!

ದೆವಾಸ್, ಫೆ.1: ಮಧ್ಯಪ್ರದೇಶ ಬಿಜೆಪಿ ಅಲ್ಪ ಸಂಖ್ಯಾತ ದಳದ ಮಾಜಿ ಉಪಾಧ್ಯಕ್ಷ ಅನ್ವರ್ ಮೇವ್ ಗೋ ಹತ್ಯೆ ನಡೆಸಿದ ಕಾರಣಕ್ಕಾಗಿ ಅವರಿಗೆ ಗಡಿಪಾರು, ಕುಟುಂಬಕ್ಕೆ ಮುಸ್ಲಿಮ್ ಸಮುದಾಯ ಬಹಿಷ್ಕಾರ ಹಾಕುವ ನಿರ್ಧಾರ ಕೈಗೊಂಡ ಘಟನೆ ಇಂದು ನಡೆದಿದೆ.
ಬಿಜೆಪಿಯಿಂದ ಹೊರದಬ್ಬಲ್ಪಟ್ಟ ಅನ್ವರ‍್ ಅವರ ಮನೆಯಲ್ಲಿ ರವಿವಾರ 30 ಕೆ.ಜಿ ಗೋಮಾಂಸ ಪತ್ತೆಯಾಗಿತ್ತು. ಈ ಸಂಬಂಧ ಅನ್ವರ್ ಸಹೋದರ ಮುಶ್ತಾಕ್ ಭುರು, ಮಕ್ಕಳಾದ ವಾಸೀಮ್, ಫಿರೋಝ್, ರಿಯಾಝ್, ಸಹೋದರ ಮಕ್ಕಳಾದ ಶಹದಾಬ್, ರಂಝಿ, ಶಾನು ಮತ್ತು ಬಾಬ ಹುಸೈನ್ ವಿರುದ್ಧ ಗೋಹತ್ಯಾ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
Next Story





